ಯಾದಗಿರಿ: ಎರಡು ಸಲ ನೋ ಬಾಲ್ ಗೆ ರನೌಟ್ ಆಗಿದ್ದೆ. ಈ ಸಲ ಮ್ಯಾಚ್ ಆಡುವುದಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಎರಡು ಸಲ ನಾನು ನೋಬಾಲ್ ಗೆ ರನೌಟ್ ಆಗಿದ್ದೇನೆ. ಹೀಗಾಗಿ, ಈ ಬಾರಿ ಮ್ಯಾಚ್ ಆಡಲ್ಲವೆಂದು ಹೇಳಿದ್ದಾರೆ.
ಸಚಿವ ಸ್ಥಾನಕ್ಕಾಗಿ ನಾನು ಯಾರ ಮೇಲೆಯೂ ಒತ್ತಡ ಹಾಕುವುದಿಲ್ಲ. ಲಾಬಿ, ಸಭೆ ಕೂಡ ಮಾಡುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.