ಚಿಕ್ಕಬಳ್ಳಾಪುರ: ಕೃತಕ ಗರ್ಭಧಾರಣೆ ಅವಕಾಶವನ್ನು ಕೆಲವರು ದುರಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವರು, ಕೆಲವರ ಶೋಕಿಗಾಗಿ ಕೃತಕ ಗರ್ಭಧಾರಣೆ (AI) ದುರುಪಯೋಗವಾಗುತ್ತಿದೆ. ಕೆಲವರು ಮದುವೆ ಇಲ್ಲದೇ ಮಕ್ಕಳನ್ನು ಪಡೆಯುತ್ತಾರೆ, ಇನ್ನು ಕೆಲವರು ಮದುವೆಯಾದ ಕೆಲ ದಿನಗಳಲ್ಲೇ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಮದುವೆಯಾಗಿ ತಾಯಿಯಾದರೆ ದೇಹದ ಸೌಂದರ್ಯ ಹಾಳಾಗುತ್ತೆ ಎಂಬ ತಪ್ಪು ಕಲ್ಪನೆಯಲ್ಲಿ ಹಲವರಿದ್ದಾರೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸುವ ಸಾಧ್ಯತೆ ಇದೆ. ಎನ್ ಇ ಪಿ ಬದಲು ಕೌಶಲ್ಯಾಧಾರಿತ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಇಡಿ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಮಾತ್ರ ಎನ್ ಇ ಪಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.