ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಗೊಂದಲ ಇನ್ನೂ ನಿಂತಿಲ್ಲ. ಶಾಸಕಾಂಗ ಸಭೆ ಕರೆಯಬೇಕೆಂದು ಒತ್ತಾಯಿಸಿ ತೆರೆಮರೆಯಲ್ಲಿ ಸಹಿ ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.
ಶಾಸಕಾಂಗ ಸಭೆಗೆ ಒತ್ತಾಯಿಸಿ ಕೆಲವು ಶಾಸಕರು ಸಹಿ ಸಂಗ್ರಹ ನಡೆಸಿದ್ದಾರೆ. ಕೆಲವು ಬಿಜೆಪಿ ಶಾಸಕರು ತೆರೆಮರೆಯಲ್ಲಿ ಸಹಿ ಸಂಗ್ರಹ ಮಾಡುತ್ತಿದ್ದು, ಎರಡು-ಮೂರು ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆಯಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ರವಾನಿಸಿ ಶಾಸಕಾಂಗ ಸಭೆ ನಡೆಸಲು ಕೋರಲಾಗುವುದು. ಸುಮಾರು 40 ರಿಂದ 45 ಶಾಸಕರ ಸಂಗ್ರಹಿಸಿ ಸಭೆಯಲ್ಲಿ ಹೈಕಮಾಂಡ್ ನಿಂದಲೂ ಹಾಜರಿರುವಂತೆ ಪತ್ರ ಕಳಿಸಲಾಗುತ್ತದೆ. ಇದರೊಂದಿಗೆ ನಾಯಕತ್ವ ಬದಲಾವಣೆ ಕೂಗು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.