ದಾವಣಗೆರೆ: ಸಾಸಲು- ಸಂತೇಬೆನ್ನೂರು ಸಂಪರ್ಕ ಕಲ್ಪಿಸುವ ರಸ್ತೆ ತೀವ್ರವಾಗಿ ಹಾಳಾಗಿದ್ದು, ಹಲವಾರು ಬಾರಿ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ ರಸ್ತೆ ಸರಿಪಡಿಸುವಂತೆ ಸೂಚಿಸಿದ್ದರೂ ಸಬೂಬು ಹೇಳುತ್ತಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂದು ರಸ್ತೆ ಸರಿ ಪಡಿಸಿದ್ದಾರೆ.
ಶಾಸಕರ ಖಡಕ್ ಸೂಚನೆಗೆ 24 ಗಂಟೆಯ ಅವಧಿಯಲ್ಲಿಯೇ ರಸ್ತೆ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಹದಗೆಟ್ಟ ಹಿನ್ನೆಲೆ ವಾಟ್ಸಾಪ್ ಮೂಲಕ ಶಾಸಕರಿಗೆ ಮಾಹಿತಿ ನೀಡಲಾಗಿತ್ತು,
ಒಂದೆಡೆ ಮಳೆ, ರಸ್ತೆಯಲ್ಲಿ ಉಂಟಾಗಿರುವ ಗುಂಡಿ, ತಗ್ಗುಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದ್ದ ಹಿನ್ನೆಲೆ ಶಾಸಕರು ತಕ್ಷಣ ಸ್ಪಂದಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಿಳಿಸಿದ್ದು, ರಸ್ತೆ ಸರಿಪಡಿಸಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದ ಬಿಡುವಿಲ್ಲದ ಕಾರ್ಯಕಲಾಪಗಳ ನಡುವೆ ಚನ್ನಗಿರಿ ತಾಲ್ಲೂಕಿನ ಸಾರ್ವಜನಿಕರ ವಾಟ್ಸಾಪ್ ಸಂದೇಶ ಗಮನಿಸಿ, ಅದಕ್ಕೆ ಸೂಕ್ತ ಕ್ರಮವಹಿಸಲು ಸೂಚಿಸಿ, ನಿರಂತರವಾಗಿ ರಸ್ತೆ ಕೆಲಸದ ಮಾಹಿತಿ ಪಡೆದು ರಸ್ತೆ ಸರಿಪಡಿಸುವವರೆಗೂ ಕಾಳಜಿ ವಹಿಸಿದ ಶಾಸಕರು ಜನರಿಗೆ ತೊಂದರೆಯಾಗದಂತೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಸಕರ ಸ್ಪಂದನೆಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.