
ರಾಯಚೂರು: ಮೊಲ ಬೇಟೆಯಾಡಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರ ಮಗ ಹಾಗೂ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶಾಸಕ ತುರ್ವಿಹಾಳ ಪುತ್ರ ಸತೀಶ್ ಗೌಡ ಹಾಗೂ ಸಹೋದರ ಸಿದ್ದನಗೌಡ ವಿರುದ್ಧ ಪ್ರಕರಣ ದಾಖಲಾಗಿದೆ. ಬೇಟೆಯಾಡಿದ ಕಾಡು ಮೊಲಗಳ ಮೆರವಣಿಗೆ ಮಾಡಿದ್ದ ವಿಡಿಯೋವನ್ನೇ ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಯಚೂರು ಎಸ್ ಪಿ ತಿಳಿಸಿದ್ದಾರೆ.
ಸಿದ್ದನಗೌಡ ಹಾಗೂ ಸತೀಶ್ ಗೌಡ ಜಾತ್ರೆ ಹೆಸರಲ್ಲಿ ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.