ಚೆನ್ನೈ: ಏಪ್ರಿಲ್-ಮೇನಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯೊಂದಿಗೆ ಡಿಎಂಕೆ ಪಕ್ಷವನ್ನ ಆಡಳಿತಕ್ಕೆ ತಂದಿರುವ ಸಿಎಂ ಎಂ.ಕೆ. ಸ್ಟಾಲಿನ್ ಅವರು ಜಿಮ್ನಲ್ಲಿ ಕಸರತ್ತು ಮಾಡುವ ವಿಡಿಯೊ ವೈರಲ್ ಆಗಿದೆ.
37 ಸೆಕೆಂಡ್ಗಳ ಈ ತುಣುಕಿನಲ್ಲಿ ಅವರು ಯುವಕರಿಗೆ ಫಿಟ್ನೆಸ್ ಬಗ್ಗೆಯೂ ಪ್ರೇರೇಪಣೆ ನೀಡಿದ್ದಾರೆ. ವೀಕೆಂಡ್ಗಳಲ್ಲಿ ಅವರು ಬಹಳ ವ್ಯಾಯಾಮ ಮಾಡಿ, ದೇಹವನ್ನು ಆರೋಗ್ಯವಾಗಿ ಇರಿಸಿಕೊಳ್ಳುವ ರೂಢಿ ಮಾಡಿಕೊಂಡಿದ್ದಾರಂತೆ.
ಭರ್ಜರಿ ಗುಡ್ ನ್ಯೂಸ್: ಕಚ್ಚಾ ತೈಲ ದರ ಭಾರಿ ಇಳಿಕೆ – ಪೆಟ್ರೋಲ್ ದರವೂ ಕಡಿತ ಸಾಧ್ಯತೆ
ಕಳೆದ ಫೆಬ್ರುವರಿಯಲ್ಲಿ ಸಂದರ್ಶನವೊಂದರಲ್ಲಿ ಸ್ಟಾಲಿನ್, ” ನನಗೆ ಬಹಳ ಕೆಲಸಗಳಿದ್ದು, ಬ್ಯುಸಿ ಆಗಿರುತ್ತೇನೆ. ಆದರೂ ಬೆಳಗ್ಗೆ ಬೇಗನೇ ಎದ್ದು ಯೋಗಾಭ್ಯಾಸ, ವಾಕಿಂಗ್ ಮಾಡುತ್ತೇನೆ. 10 ದಿನಕ್ಕೊಮ್ಮೆ ಸೈಕಲ್ ತುಳಿಯುತ್ತೇನೆ. ನನ್ನ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದು ಮನಸ್ಸಿನ ಒತ್ತಡ ಹೋಗಿಸುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೂಡ ಕೇಳುತ್ತಿರುತ್ತೇನೆ” ಎಂದು ಹೇಳಿಕೊಂಡಿದ್ದರು.
ಇತ್ತೀಚೆಗೆ ಸ್ಟಾಲಿನ್ ಅವರು ಜಾರಿಗೆ ತಂದಿರುವ ಆರೋಗ್ಯ ಸೇವೆ ಯೋಜನೆ ‘ಮಕ್ಕಳೈ ಥೇಡಿ ಮರುಧುವಂ’ ಎಂಬ ಮನೆ ಬಾಗಿಲಿಗೆ ಚಿಕಿತ್ಸೆಯು ಬಹಳ ಜನಪ್ರಿಯತೆ ಪಡೆಯುತ್ತಿದೆ.