ಮೊಸರು ತಂಪಾದ ಹಾಗೂ ರುಚಿಯಾದ ಆಹಾರವಾಗಿದೆ. ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದ್ರ ಬಳಕೆಯಿಂದ ತೂಕ ಕಡಿಮೆಯಾಗುತ್ತದೆ. ಯಸ್, ಆಹಾರ ತಜ್ಞ ಡಾ.ರಂಜನಾ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊಸರಿನ ಜೊತೆ ಸೋಂಪಿನ ಪೌಡರ್ ಬೆರಸಿ ಕುಡಿಯುವುದ್ರಿಂದ ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ. ಥೈರಾಯ್ಡ್ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಸೋಂಪು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಮೊಸರಿನಲ್ಲಿರುವ ಕ್ಯಾಲ್ಸಿಯಂ ಮತ್ತು ಸೋಂಪನ್ನು ಒಟ್ಟಿಗೆ ಸೇವಿಸುವುದ್ರಿಂದ ಥೈರಾಯ್ಡ್ ಸಮಸ್ಯೆ ಕಡಿಮೆಯಾಗುತ್ತದೆ.
ಮೊಸರು ಬೆರೆಸಿ ಮೆಂತ್ಯ ಪುಡಿಯನ್ನು ಸೇವನೆ ಮಾಡಬೇಕು. ಹೊಟ್ಟೆಯ ಕೊಬ್ಬನ್ನು ಕಡಿಮೆಯಾಗುತ್ತದೆ. ಮೊಸರು ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಮೆಂತ್ಯೆ ಫೈಬರ್ ಹೊಂದಿರುತ್ತದೆ. ಅತಿಯಾದ ಹಸಿವನ್ನು ಕಡಿಮೆ ಮಾಡುತ್ತದೆ. ಕೊಬ್ಬು ಶೇಖರಣೆಯನ್ನು ಕಡಿಮೆ ಮಾಡುತ್ತದೆ.
ಮೊಸರು ಮತ್ತು ಅರಿಶಿನ ಪುಡಿಯ ಸೇವನೆ ಮಾಡುವುದ್ರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ವ್ಯವಸ್ಥೆಗೆ ಪ್ರಯೋಜನಕಾರಿ. ಅರಿಶಿನವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.