ಶುಂಠಿ ಆಹಾರದ ರುಚಿ, ಪರಿಮಳ ಹೆಚ್ಚಿಸುವುದರ ಜೊತೆಗೆ ಅದು ಆರೋಗ್ಯಕ್ಕೂ ತುಂಬಾ ಉತ್ತಮ. ಅಲ್ಲದೇ ಶುಂಠಿಯನ್ನು ಕೂದಲಿನ ಸಮಸ್ಯೆಯನ್ನು ನಿವಾರಿಸಲು ಕೂಡ ಬಳಸಬಹುದು. ಇದರಿಂದ ತಲೆಹೊಟ್ಟು, ನೆತ್ತಿಯ ತುರಿಕೆ, ಕೂದಲುದುರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಶುಂಠಿಗೆ ಇವುಗಳನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ.
*1 ನಿಂಬೆ ಹಣ್ಣಿನ ರಸಕ್ಕೆ 1 ಇಂಚು ಶುಂಠಿ ರಸವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ ಬಳಿಕ 45 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕೊಮ್ಮೆ ಮಾಡಿ.
*1 ಚಮಚ ಜೇನುತುಪ್ಪಕ್ಕೆ ಶುಂಠಿ ಫೇಸ್ಟ್ ನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 45 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕೊಮ್ಮೆ ಮಾಡಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
*2 ಚಮಚ ಶುಂಠಿ ರಸ, 1 ಚಮಚ ಮೊಸರು, 1 ಚಮಚ ನಿಂಬೆ ರಸ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ 35 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ತಿಂಗಳಿಗೆ 2 ಬಾರಿ ಮಾಡಿ.