ಕಾಳುಮೆಣಸಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಕೆಮ್ಮು, ಶೀತ ಮೊದಲಾದ ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳೂ ದೂರವಾಗುತ್ತವೆ. ಇದನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಈ ಲಾಭಗಳನ್ನು ಪಡೆಯಬಹುದು.
ಇದರಲ್ಲಿ ಕ್ಯಾಲ್ಸಿಯಂ. ಮಿನರಲ್ಸ್ ಮತ್ತು ಕಬ್ಬಿಣಾಂಶವಿದ್ದು ದಿನದಲ್ಲಿ ಎರಡು ಬಾರಿ ಈ ನೀರನ್ನು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ತೂಕ ಇಳಿಸಲು ನೆರವಾಗುತ್ತದೆ. ಒಂದು ಲೋಟ ಬಿಸಿನೀರಿಗೆ ಅರ್ಧ ಚಿಕ್ಕ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಹಾಗು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ದೇಹದ ಕೊಬ್ಬು ಕರಗುತ್ತದೆ. ತೂಕವೂ ಕಡಿಮೆಯಾಗುತ್ತದೆ.
ತಂಪು ಪಾನೀಯ ಕುಡಿದ ಕಾರಣಕ್ಕೆ ಶೀತ, ಜ್ವರ ಕಾಣಿಸಿಕೊಂಡಿದ್ದರೆ ಕರಿಮೆಣಸಿನ ಬೀಜವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯಿರಿ. ಇಲ್ಲವೇ ಅದರ ಕಷಾಯ ತಯಾರಿಸಿ ಕುಡಿಯಿರಿ.