ಮನೆಯಲ್ಲಿ ಶುಭ ಸಮಾರಂಭಗಳು ಇದ್ದಾಗ ಕೈಗೆ ಮೆಹಂದಿ ಹಾಕಿಕೊಳ್ಳುತ್ತೇವೆ, ಮೆಹಂದಿ ಕೆಂಪಾಗಿ ಬಂದರೆ ಇದು ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರ ಕೈಗೆ ಹಚ್ಚಿದ ಮೆಹಂದಿ ಕೆಂಪಾಗುವುದಿಲ್ಲ. ಅಂತವರು ಮೆಹಂದಿ ತ್ವರಿತವಾಗಿ ಕೆಂಪಾಗಲು ಇವುಗಳನ್ನು ಹಚ್ಚಿ.
*ಅಡುಗೆ ಸೋಡಾ ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಇದನ್ನು ಕೈಗಳಿಗೆ ಹಚ್ಚಿ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ಮೆಹಂದಿ ಕೆಂಪಾಗುತ್ತದೆ.
*ಸ್ವಲ್ಪ ಉಪ್ಪು ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ ಚರ್ಮದ ಮೇಲೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಹಾಗೆ ಇಟ್ಟು ಬಳಿಕ ವಾಶ್ ಮಾಡಿ.
*ಬೆಚ್ಚಗಿನ ನೀರಿಗೆ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ನಿಮ್ಮ ಕೈಗಳನ್ನು ಸುಮಾರು 15 ನಿಮಿಷಗಳ ಕಾಲ ನೆನೆಸಿಡಿ. ಇದನ್ನು 2 ಬಾರಿ ಮಾಡಿದರೆ ಮೆಹಂದಿ ಕೆಂಪಾಗುತ್ತದೆ.