
ಮಂಗಳೂರು: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಓರ್ವ ಯುವಕ ನಾಪತ್ತೆಯಾದ ಘಟನೆ ಎಳನೀರು ಗ್ರಾಮದ ಬಳಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಎಳನೀರು ಗ್ರಾಮದ ಬಳಿ ಗುಡ್ಡ ಕುಸಿದು ಓರ್ವ ಯುವಕ ನಾಪತ್ತೆಯಾಗಿದ್ದಾನೆ. ಉಜಿರೆಯ ನಾಲ್ವರು ಯುವಕರು ಜಲಪಾತಕ್ಕೆ ಬಂದಿದ್ದು, ನೀರಿನಲ್ಲಿ ಆಡುವಾಗ ಗುಡ್ಡ ಕುಸಿದು ಘಟನೆ ನಡೆದಿದೆ. ಬಂಗಾರ್ ಪಲ್ಕೆ ಸಮೀಪ ಅರಣ್ಯ ಪ್ರದೇಶದಲ್ಲಿರುವ ಜಲಪಾತದ ಬಳಿ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಮೂವರು ಅಪಾಯದಿಂದ ಪಾರಾಗಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.