alex Certify ಇನ್ನೂ ಪತ್ತೆಯಾಗದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ನೌಕೆ; ಇದರಲ್ಲಿದೆ ಕೇವಲ 70-96 ಗಂಟೆಗಳ ಕಾಲ ಉಸಿರಾಡಲು ಬೇಕಾಗುವ ಆಮ್ಲಜನಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಪತ್ತೆಯಾಗದ ಟೈಟಾನಿಕ್ ಪ್ರವಾಸಿ ಜಲಾಂತರ್ಗಾಮಿ ನೌಕೆ; ಇದರಲ್ಲಿದೆ ಕೇವಲ 70-96 ಗಂಟೆಗಳ ಕಾಲ ಉಸಿರಾಡಲು ಬೇಕಾಗುವ ಆಮ್ಲಜನಕ

ಟೈಟಾನಿಕ್ ಅವಶೇಷಗಳನ್ನು ನೋಡಲು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ಉತ್ತರ ಅಟ್ಲಾಂಟಿಕ್‌ನಲ್ಲಿ ಭಾನುವಾರ ನಾಪತ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ.

ಐದು ಜನರಿದ್ದ ಸಬ್‌ಮರೈನ್ ಪ್ರವಾಸಿ ನೌಕೆಯನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಓರ್ವ ಪೈಲಟ್ ಮತ್ತು ನಾಲ್ವರು ಪ್ರವಾಸಿಗರಿದ್ದ ಜಲಾಂತರ್ಗಾಮಿಯಲ್ಲಿ ಸುಮಾರು 70 ರಿಂದ 96 ಗಂಟೆಗಳ ಕಾಲ ಉಳಿಯಲು ಸಾಕಷ್ಟು ಆಮ್ಲಜನಕವಿದೆ ಎಂದು ವರದಿಯಾಗಿದೆ.

21 ಅಡಿಯ ಹಡಗು ನಾಲ್ಕು ದಿನಗಳ ತುರ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಶೋಧ ಮತ್ತು ರಕ್ಷಣಾ ಪ್ರಯತ್ನ ಕಾರ್ಯಾಚರಣೆಯಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಮತ್ತು ಕೆನಡಾದ ಕೋಸ್ಟ್ ಗಾರ್ಡ್‌ಗಳೊಂದಿಗಿನ ಸಿಬ್ಬಂದಿಗಳು ಕೇಪ್ ಕಾಡ್‌ನಿಂದ ಪೂರ್ವಕ್ಕೆ 900 ಮೈಲುಗಳಷ್ಟು ಸಮುದ್ರದ ಮೇಲ್ಮೈಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನೀರಿನ ಕೆಳಗೆ 13,000 ಅಡಿಗಳಷ್ಟು ಆಳದಲ್ಲಿ ಶಬ್ದಗಳನ್ನು ಕೇಳಲು ಸೋನಾರ್ ಅನ್ನು ಬಳಸಿದ್ದಾರೆ.

ಸಬ್‌ಮರೈನ್ ನಲ್ಲಿದ್ದ ಐದು ಜನರಲ್ಲಿ ಒಬ್ಬ ಬ್ರಿಟಿಷ್ ಬಿಲಿಯನೇರ್ ಕೂಡ ಸೇರಿದ್ದಾರೆಂದು ಗೊತ್ತಾಗಿದೆ. ಟೈಟಾನಿಕ್ ಅವಶೇಷಗಳನ್ನು ನೋಡಲು ಜನರನ್ನು ಕರೆದೊಯ್ಯುತ್ತಿದ್ದ ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ತನ್ನ ಸಿಬ್ಬಂದಿಯೊಂದಿಗೆ ಭಾನುವಾರ ನಾಪತ್ತೆಯಾಯಿತು.

ಸಬ್‌ಮರೈನ್ ಓಷನ್‌ಗೇಟ್ ಎಕ್ಸ್ ಪೆಡಿಶನ್ಸ್‌ ಕಂಪನಿಗೆ ಸೇರಿದ್ದು ಅನೇಕ ವರದಿಗಳ ಪ್ರಕಾರ ಆಳ ಸಮುದ್ರದ ದಂಡಯಾತ್ರೆಗಾಗಿ ಮಾನವಸಹಿತ ಸಬ್‌ಮರೈನ್ ಗಳನ್ನು ನಿಯೋಜಿಸುತ್ತದೆ.

ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಆದರೆ ನಾಪತ್ತೆಯಾದವರ ನಿಖರ ಸಂಖ್ಯೆಯನ್ನು ಅದು ಖಚಿತಪಡಿಸಿಲ್ಲ.

ಟೈಟಾನಿಕ್ 1912 ರಲ್ಲಿ ತನ್ನ ಚೊಚ್ಚಲ ಪ್ರಯಾಣದಲ್ಲಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ನಂತರ ಅಟ್ಲಾಂಟಿಕ್ ನಲ್ಲಿ ಮುಳುಗಿತು. ಟೈಟಾನಿಕ್ ಮುಳುಗಿದಾಗ 1,500 ಕ್ಕೂ ಹೆಚ್ಚು ಜನರು ಮೃತಪಟ್ಟರು. ಹಡಗಿನ ಅವಶೇಷಗಳನ್ನು 1985 ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್ ಸಾಗರದ ಕೆಳಭಾಗದಲ್ಲಿ ಅಂದಿನಿಂದ ಇದನ್ನು ವ್ಯಾಪಕವಾಗಿ ಪರಿಶೋಧಿಸಲಾಗಿದೆ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...