ಶಿವಮೊಗ್ಗ: ನಗರ ಪಾಲಿಕೆ ಸ್ವಚ್ಛತಾ ಕಾರ್ಯದ ಮೇಸ್ತ್ರಿ ವಿಡಿಯೋ ಹರಿಬಿಟ್ಟು ನಾಪತ್ತೆಯಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ವಲಯದಲ್ಲಿ ಆತಂಕ ಮನೆ ಮಾಡಿದೆ.
ವಿಷದ ಬಾಟಲಿ ಹಿಡಿದು ವಿಡಿಯೋ ಮಾಡಿರುವ ಮೇಸ್ತ್ರಿ ಮೂರ್ತಿ ನಾಪತ್ತೆಯಾಗಿದ್ದು, ಅವರಿಗೆ ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ಆದರೂ ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ, ಎರಡು ವರ್ಷದಿಂದ ಮೇಸ್ತ್ರಿ ಆಗಿದ್ದೆ. ಈಗ ಚರಂಡಿ ತೆಗೆಯುವ ಕೆಲಸ ಅಂದ್ರೆ ಹೇಗೆ ಎಂದು ವಿಷದ ಬಾಟಲಿ ಹಿಡಿದುಕೊಂಡು ವಿಡಿಯೋ ಮಾಡಿ ಹರಿಬಿಟ್ಟು ಮೂರ್ತಿ ನಾಪತ್ತೆಯಾಗಿದದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಬಳಿ ಮೂರ್ತಿಯ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ಪೊಲೀಸರು ಪತ್ತೆಗೆ ಮುಂದಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.