ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಾ, ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಮಹಿಳೆಯೊಬ್ಬಳು ಇಂತಹ ದಂಧೆಗೆ ಇಳಿದಿದ್ದು, ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಜ್ಮಾ ಕೌಸರ್, ಮಹಮ್ಮದ್ ಆಶಿಕ್, ಖಲೀಲ್ ಬಂಧಿತ ಆರೋಪಿಗಳು.
ನಜ್ಮಾ ಕೌಸರ್ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಳು. ಶೋಕಿ ಜೀವನಕ್ಕಾಗಿ ಹನಿಟ್ರ್ಯಾಪ್ ದಂಧೆಗೆ ಇಳಿದಿದ್ದಾಳೆ. ಯುವಕರನ್ನೇ ಟಾರ್ಗೆಟ್ ಮಾಡಿ ನಜ್ಮಾ ಕೌಸರ್ ಮಿಸ್ಡ್ ಕಾಲ್ ಕೊಡುತ್ತಿದ್ದಳು. ಮಿಸ್ಡ್ ಕಾಲ್ ಇದೆ ಎಂದು ವಾಪಾಸ್ ಕರೆ ಮಾಡಿದಾಗ ನಜ್ಮಾ ಚನ್ನಾಗಿ ಮತನಾಡುತ್ತಾ ಪರಿಚಯ ಮಾಡಿಕೊಳ್ಳುತ್ತಿದ್ದಳು. ಹೀಗೆ ಕರೆ ಮಾಡುತ್ತಲೇ ಹನಿಟ್ರ್ಯಾಪ್ ಬಲೆ ಬೀಸುತ್ತಿದ್ದಳು.
ಆರಂಭದಲ್ಲಿ ಫೋನ್ ನಲ್ಲಿ ಪರಿಚಯಿಸಿಕೊಂಡು ಕಷ್ಟ ಎಂದು ಹೇಳಿಕೊಂಡು ಸಣ್ಣಪುಟ್ಟ ಹಣ ಸಹಾಯ ಪಡೆಯುತ್ತಿದ್ದ ನಜ್ಮಾ, ಕೆಲ ದಿನಗಳಲ್ಲೇ ಪಡೆದ ಹಣ ಹಿಂತಿರುಗಿಸಿ ನಂಬಿಕೆ ಹುಟ್ಟಿಸಿಕೊಳ್ಳುತ್ತಿದ್ದಳು. ಬಳಿಕ ಸಲುಗೆಯಿಂದ ಮಾತನಾಡಿ ಬಲೆಗೆ ಕೆಡಗಿಕೊಳ್ಳುತ್ತಿದ್ದಳು. ಹೀಗೆ ಪರಿಚಯಿಸಿಕೊಂಡ ಯುವಕರನ್ನು ಮನೆಗೆ ಕರೆಯುತ್ತಿದ್ದಳು. ಮನೆಗೆ ಹೋದ ಯುವಕರು ಲಾಕ್ ಆಗುತ್ತಿದ್ದರು. ಈ ವೇಳೆ ನಜ್ಮಾಳ ಗ್ಯಾಂಗ್ ಎಂಟ್ರಿಕೊಟ್ಟು ಧಮ್ಕಿ ಹಾಕಿ ಹಣ ದೋಚುತ್ತಿದ್ದರು. ಬೆದರಿಸಿ ಹಣ ಪಡೆಯುತ್ತಿದ್ದರು.
ನಜ್ಮಾ ಗ್ಯಾಂಗ್ ನಿಂದ ಹನಿಟ್ರ್ಯಾಪ್ ಗೆ ಒಳಗಾದ ಯುವಕನೊಬ್ಬ ಸಂಪಿಗೆಹಳ್ಳಿ ಪೊಲೀಸರುಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಜ್ಮಾ ಹಾಗೂ ಗ್ಯಾಂಗ್ ನ್ನು ಬಂಧಿಸಿದ್ದಾರೆ.