ಮುಂಬೈ: 28 ವರ್ಷದ ನಂತರ ಭಾರತದಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಜೆಕ್ ಗಣರಾಜ್ಯ ಸುಂದರಿ ಕೃಷ್ಣ ಕ್ರಿಸ್ಟಿನಾ ಪಿಚ್ ಕೋವಾ ವಿಜೇತರಾಗಿದ್ದಾರೆ.
ಲೆಬನಾನ್ ಸುಂದರಿ ಯೆಸ್ಮಿನಾ ಮೊದಲ ರನ್ನರ್ ಅಪ್ ಆಗಿದ್ದಾರೆ. ಭಾರತದ ಸುಂದರಿ ಹಾಗೂ ಕನ್ನಡತಿ ಸಿನಿ ಶೆಟ್ಟಿ ಅವರು ಸ್ಪರ್ಧೆಯಿಂದ ಹೊರಬಿದ್ದರು. ಟಾಪ್ 4 ಸುಂದರಿಯರ ಆಯ್ಕೆಗೆ ನಡೆದ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಸ್ಪರ್ಧೆಯಿಂದ ಹೊರ ಬಂದಿದ್ದಾರೆ. ಭಾರತ ಈ ಪ್ರತಿಷ್ಠಿತ ಪ್ರಶಸ್ತಿಯನ್ನು 6 ಸಲ ಗೆದ್ದಿದ್ದು, ಈ ಬಾರಿ ವಿಫಲವಾಗಿದೆ.
ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ 71ನೇ ವಿಶ್ವ ಸುಂದರಿ. ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 24 ವರ್ಷದ ಯುವತಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದರು. ಅವರು 115 ದೇಶಗಳ ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಿದರು. ಕಳೆದ ವರ್ಷದ ವಿಜೇತೆ, ವಿಶ್ವ ಸುಂದರಿ 2022 ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಕ್ರಿಸ್ಟೈನಾ ಅವರ ಉತ್ತರಾಧಿಕಾರಿಯಾಗಿ ಕಿರೀಟವನ್ನು ಪಡೆದರು. ಲೆಬನಾನ್‌ನ ಯಾಸ್ಮಿನಾ ಜೈಟೌನ್ ಸೌಂದರ್ಯ ಸ್ಪರ್ಧೆಯಲ್ಲಿ ಕರೋಲಿನಾರಿಂದ ಮೊದಲ ರನ್ನರ್-ಅಪ್ ಕಿರೀಟವನ್ನು ಪಡೆದರು.