ಹಲವಾರು ಮಿಸ್ ಯೂನಿವರ್ಸ್ ಇಂಡೋನೇಷ್ಯಾ ಸ್ಪರ್ಧಿಗಳು, ಸಂಘಟಕರ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ.
ಆಗಸ್ಟ್ 3 ರಂದು ಫೈನಲ್‌ಗೆ ಎರಡು ದಿನಗಳ ಮೊದಲು ದೇಹ ತಪಾಸಣೆ ಮತ್ತು ಛಾಯಾಚಿತ್ರಗಳಿಗಾಗಿ ತಮ್ಮ ಟಾಪ್‌ಗಳನ್ನು ತೆಗೆಯಲು ಸ್ಪರ್ಧಿಗಳನ್ನು ಕೇಳಲಾಯಿತು. ಸಂಘಟಕರು ಯುವತಿಯರಿಗೆ ಅವರ ದೇಹದ ಮೇಲೆ ಯಾವುದೇ ಗುರುತುಗಳು, ಹಚ್ಚೆಗಳನ್ನು ಪರೀಕ್ಷಿಸಬೇಕು ಎಂದು ಹೇಳಿದರು.
ಇದು ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಯ್ತು. ಇದ್ರಿಂದ ನನ್ನ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಪರ್ಧಿಯೊಬ್ಬರು ಹೇಳಿದ್ದಾರೆ. ಇದು ನನ್ನ ಮೇಲೆ ಮಾನಸಿಕವಾಗಿ ಪರಿಣಾಮ ಬೀರಿದೆ ಎಂದು ಮತ್ತೊಬ್ಬರು ಸ್ಪರ್ಧಿ ಹೇಳಿದ್ರು.
ಈ ಬಗ್ಗೆ ಇಂಡೋನೇಷಿಯಾದ ರಾಜಧಾನಿ ಜಕಾರ್ತ ಪೊಲೀಸರು ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಮಿಸ್ ಯೂನಿವರ್ಸ್ ಇಂಡೋನೇಷ್ಯಾ ಸಂಸ್ಥೆಯು ಆರೋಪಗಳ ಬಗ್ಗೆ ತನಿಖೆ ನಡೆಸಲಿದೆ ಎಂದು ಅದರ ಮಾಲೀಕ ಸೆಲೆಬ್ರಿಟಿ ಪಾಪ್ಪಿ ಕ್ಯಾಪೆಲ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಾಗತಿಕ ಮಿಸ್ ಯೂನಿವರ್ಸ್ ಸಂಸ್ಥೆಯು ಈ ವಿಷಯವನ್ನು ಪರಿಶೀಲಿಸುತ್ತಿದೆ. ಲೈಂಗಿಕ ಅನುಚಿತತೆಯ ಆರೋಪಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.
ದೇಶದಲ್ಲಿ ದೇಹ ತಪಾಸಣೆಗಳು ಸಾಮಾನ್ಯವಾಗಿದ್ದರೂ, ಸ್ಪರ್ಧಿಗಳನ್ನು ಬೆತ್ತಲೆಯಾಗುವಂತೆ ಕೇಳುವುದಿಲ್ಲ ಎಂದು ಮಾಜಿ ಮಿಸ್ ಇಂಡೋನೇಷ್ಯಾ ಮರಿಯಾ ಹರ್ಫಾಂಟಿ ಹೇಳಿದ್ದಾರೆ.
ಆದರೆ, ದೂರುದಾರರೊಬ್ಬರು, ಮುಚ್ಚಿದ ಕೋಣೆಯಲ್ಲಿ ದೇಹದ ತಪಾಸಣೆ ನಡೆಸಲಾಯಿತು. ಈ ವೇಳೆ ಕೆಲವು ಪುರುಷರು ಸಹ ಇದ್ದರು ಎಂದು ಹೇಳಿದರು. ಬಾಗಿಲು ಸಂಪೂರ್ಣವಾಗಿ ಮುಚ್ಚಿರಲಿಲ್ಲ. ಇದು ಹೊರಗಿನ ಜನರಿಗೆ ಸಹ ಕಾಣಿಸುತ್ತಿತ್ತು ಎಂದು ದೂರಿದ್ದಾರೆ.