ಮದುವೆ ಸಮಾರಂಭವನ್ನು ಯೋಜಿಸುವಾಗ ಮದುವೆಯ ಕಾರ್ಡ್ಗಳನ್ನು ಆಯ್ಕೆ ಮಾಡುವುದು ಮತ್ತು ಮುದ್ರಿಸುವಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ. ನೋಡಲು ಆಕರ್ಷಕವಾಗಿದ್ದರೆ ಸಾಲದು ತಪ್ಪಾಗಿ ಮುದ್ರಿಸಬಾರದು. ಇದೀಗ ಇಂಥದ್ದೇ ತಪ್ಪಾದ ಮದುವೆ ಆಮಂತ್ರಣ ಕರೆಯೋಲೆಯ ಮುದ್ರಣವು ಅತಿಥಿಗಳನ್ನು ಗೊಂದಲಗೊಳಿಸಿದೆ.
ಭಾರತೀಯರು ತಮ್ಮ ಮದುವೆಯ ಆಮಂತ್ರಣಗಳನ್ನು ಕಾವ್ಯಾತ್ಮಕವಾಗಿಸಲು ಇಷ್ಟಪಡುತ್ತಾರೆ. ಇದಕ್ಕಾಗಿ, ಅವರು ತಮ್ಮ ಕಾರ್ಡ್ಗಳಲ್ಲಿ ಗಾದೆಗಳು ಅಥವಾ ಕವಿತೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅಂತಹ ಒಂದು ಕವನವನ್ನು ಮದುವೆ ಕಾರ್ಡ್ನಲ್ಲಿ ಬಳಸಲಾಗಿದೆ. ನಾನು ಈ ಆಹ್ವಾನವನ್ನು ಪ್ರೀತಿಯಿಂದ ಕಳುಹಿಸುತ್ತಿದ್ದೇನೆ, ದಯವಿಟ್ಟು ಮದುವೆಗೆ ಬರಲು ಮರೆತುಬಿಡಿ ಎಂದು ಬರೆಯಲಾಗಿತ್ತು.
ಇದನ್ನು ಓದಿದ ಅತಿಥಿಗಳು ಮದುವೆಗೆ ಬರಬೇಕೋ ಬೇಡವೋ ಎಂದು ಗೊಂದಲಕ್ಕೊಳಗಾಗಿದ್ದಾರೆ. ಆಮಂತ್ರಣ ಮುದ್ರಣದ ದೋಷದಿಂದಾಗಿ ವಾಕ್ಯದ ಅರ್ಥವೇ ಬದಲಾಯಿತು. ಮದುವೆಗೆ ಬರಲು ಮರೆಯದಿರಿ ಅನ್ನೋ ಬದಲು ಮರೆತುಬಿಡಿ ಅಂತಾ ಬರೆದು ಪೇಚಿಗೆ ಸಿಲುಕಿಕೊಂಡಿದ್ದಾರೆ.
ಸದ್ಯ ಈ ಆಮಂತ್ರಣ ಪತ್ರಿಕೆ ಫೇಸ್ಬುಕ್ ನಲ್ಲಿ ಭಾರಿ ವೈರಲ್ ಆಗಿದೆ. ಮದುವೆಯ ಆಮಂತ್ರಣ ಪತ್ರ ಬಂದಿದೆ. ಆದರೆ, ನಾನು ಹೋಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಮೀಮ್ಸ್ ಮಾಡಲಾಗಿದೆ. ಸದ್ಯ, ಈ ಪೋಸ್ಟ್ ಭಾರಿ ವೈರಲ್ ಆಗಿದೆ.