ಬೆಂಗಳೂರಲ್ಲಿ ಫೋನ್, ಪರ್ಸ್, ಸರ ಕಳ್ಳತನ ಮಾಡುವವರ ಸಂಖ್ಯೆ ಕೊರೋನಾ ಸಮಯದಲ್ಲಿ ಕಡಿಮೆಯಾಗಿತ್ತಾದರೂ, ಈಗ ಮತ್ತೆ ಹೆಚ್ಚಾಗುತ್ತಿದೆ. ರಸ್ತೆಯಲ್ಲಿ ವಾಕಿಂಗ್ ಮಾಡುವವರನ್ನ ಟಾರ್ಗೆಟ್ ಮಾಡಿಕೊಂಡಿದ್ದ ಕಳ್ಳರು ಈಗ ಹೈಫೈ ಕಾಲೋನಿಗಳಿಗೂ ತಮ್ಮ ಜಾಲವನ್ನು ಬೀಸಿದ್ದಾರೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನಲ್ಲಿ ಕಳ್ಳರು, ಶಾಸಕರೊಬ್ಬರ ಪತ್ನಿಯ ಮೊಬೈಲ್ ಕಳ್ಳತನ ಮಾಡಿದ್ದಾರೆ. ಗುಲ್ಭರ್ಗ ಜಿಲ್ಲೆಯ, ಚಿತ್ತಾಪುರ ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ ಖರ್ಗೆಯವರ ಪತ್ನಿ ಶೃತಿ ಖರ್ಗೆಯವರ ಮೊಬೈಲ್ ಕಳ್ಳತನವಾಗಿದೆ.
ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ ಆಟಗಾರರಿಗೆ ಹಣದ ಹೊಳೆ…!
ಮೊದಲೇ ಹೇಳಿದಂತೆ ಇಷ್ಟುದಿನ ಸಾಮಾನ್ಯ ಏರಿಯಾಗಳನ್ನ ಟಾರ್ಗೆಟ್ ಮಾಡಿದ್ದ ಕಳ್ಳರು ಈಗ, ಡಾಲರ್ಸ್ ಕಾಲೋನಿ, ಸದಾಶಿವನಗರ ಸೇರಿದಂತೆ ಹೈಫೈ ಏರಿಯಾಗಳನ್ನ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಈ ಹಿಂದೆ ಕೂಡಾ ಸದಾಶಿವನಗರದಲ್ಲಿ 3 ಕಳ್ಳತನ ಪ್ರಕರಣ ದಾಖಲಾಗಿವೆ.
ಇನ್ನು ಶೃತಿ ಖರ್ಗೆಯವರ ಫೋನ್ ಕಳುವಿನ ಬಗ್ಗೆ ಹೇಳುವುದಾದರೆ, ನಿನ್ನೆ ಮುಂಜಾನೆ ಸುಮಾರು 6:45ರ ಸಮಯದಲ್ಲಿ ಈ ಕಳ್ಳತನವಾಗಿದೆ. ಶೃತಿಯವರೊಬ್ಬರೇ ವಾಕಿಂಗ್ ಮಾಡುತ್ತಿದ್ದನ್ನು ಕಂಡ ಕಳ್ಳರಿಬ್ಬರು ಅವರನ್ನ ಹಿಂಬಾಲಿಸಿ ಬಂದು ಅವರ ಕೈಯ್ಯಲ್ಲಿದ್ದ ಐಫೋನ್ 11 ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಇನ್ನು ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ಖರ್ಗೆ ಪಿಎ ಪ್ರದೀಪ್ ದೂರು ದಾಖಲಿಸಿದ್ದಾರೆ.