![](https://kannadadunia.com/wp-content/uploads/2023/07/police-crime.png)
ಬೆಂಗಳೂರು: ದೇವನಹಳ್ಳಿ ತಾಲೂಕಿನ ಹಡ್ಯಾಳ ಗ್ರಾಮದಲ್ಲಿ ಕಿಡಿಗೇಡಿಗಳು ಇನ್ನೂರಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ನಾಶ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಹಡ್ಯಾಳ ಗ್ರಾಮದಲ್ಲಿ ತಡರಾತ್ರಿ ಮಚ್ಚಿನಿಂದ ದಾಳಿಂಬೆ ಗಿಡ ಕತ್ತರಿಸಲಾಗಿದೆ. ಒಂದೂವರೆ ವರ್ಷದಿಂದ ಬೆಳೆಸಿದ್ದ ದಾಳಿಂಬೆ ಗಿಡಗಳನ್ನು ಕತ್ತರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಚನ್ನರಾಯಪಟ್ಟಣ ಠಾಣೆ ಹಿಂಭಾಗದಲ್ಲಿಯೇ ಬೆಳೆ ನಾಶ ಮಾಡಲಾಗಿದೆ. ವೆಂಕಟೇಗೌಡ ಎಂಬುವರ ಜಮೀನಿನಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಯಲಾಗಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಗಿಡಗಳ ನಾಶದಿಂದ ರೈತ ಕಂಗಾಲಾಗಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.