ಬಾಗಲಕೋಟೆ: ಹೆಣ್ಣು ಭ್ರೂಣ ಹತ್ಯೆಗೆ ಗರ್ಭಪಾತ ನಡೆಸಿದ ಪ್ರಕರಣ ಬಾಗಲಕೋಟೆ ಜಿಲ್ಲೆಯಲ್ಲಿಯೂ ಬೆಳಕಿಗೆ ಬಂದಿದೆ. ಮಹಾಲಿಂಗಪುರದ ಪ್ಲಾಟ್ ನಲ್ಲಿರುವ ನಿವಾಸದಲ್ಲಿ ಸೋಮವಾರ ಗರ್ಭಪಾತ ಮಾಡಿಸಿಕೊಂಡ ಮಹಾರಾಷ್ಟ್ರದ ಮಹಿಳೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಿಂಗಪುರದ ನರ್ಸ್ ಕವಿತಾ ಬಾಡನವರ ಸೇರಿ ಮೂವರನ್ನು ಬಂಧಿಸಲಾಗಿದೆ
ಮಹಾಲಿಂಗಪುರದ ಕವಿತಾ ಬಾಡನವರ, ಮಹಾರಾಷ್ಟ್ರದ ಸಂಜಯ ಗೌಳಿ, ಸಂಗೀತಾ ಗೌಳಿ, ವಿಜಯ ಸಂಜಯ ಗೌಳಿ, ಕೊಪ್ಪಳದ ಮಾರುತಿ ಬಾಬುಸೋಖರಾತ್, ಡಾ. ಕೋತ್ವಾಲೆ ಸೇರಿ 7 ಮಂದಿ ವಾಲೆ ವಿರುದ್ಧ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ವಿಜಯ ಸಂಜಯ ಗೌಳಿ, ಡಾ. ಮಾರುತಿ ಬಾಬು, ಕವಿತಾ ಬಾಡನವರ ಅವರನ್ನು ಬಾಗಲಕೋಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸೋನಾಲಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರನೇ ಬಾರಿ ಗರ್ಭಿಣಿಯಾಗಿದ್ದರು. ಲಿಂಗಪರೀಕ್ಷೆ ಮಾಡಿ ಹೆಣ್ಣು ಮಗು ಎಂದು ತಿಳಿದು ಗರ್ಭಪಾತ ನಡೆಸಲಾಗಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.