alex Certify ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಕ್ಯಾನ್ಸರ್ ಗೆ ಕಾರಣವಾಗ್ತಿದೆ ಗರ್ಭಪಾತ ತಡೆಯುವ ಮಾತ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಕ್ಯಾನ್ಸರ್ ಗೆ ಕಾರಣವಾಗ್ತಿದೆ ಗರ್ಭಪಾತ ತಡೆಯುವ ಮಾತ್ರೆ

ಇತ್ತೀಚಿನ ದಿನಗಳಲ್ಲಿ ಗರ್ಭಪಾತ ಪ್ರಕರಣ ಹೆಚ್ಚಾಗಿದೆ. ಅನೇಕ ಮಹಿಳೆಯರಿಗೆ ಗರ್ಭಪಾತದ ಅಪಾಯ ಹೆಚ್ಚಾಗ್ತಿದೆ. ಇದನ್ನು ತಡೆಯಲು ಮಾತ್ರೆಗಳನ್ನು ಸೇವಿಸಲಾಗುತ್ತದೆ. ಗರ್ಭಪಾತ ತಡೆಯುವ ಮಾತ್ರೆಗಳ ಬಗ್ಗೆ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಗರ್ಭಪಾತ ತಡೆಯಲು ವಿವಿಧ ಔಷಧಿಗಳನ್ನು ಬಳಸಲಾಗುತ್ತದೆ. ಈ ಗರ್ಭಪಾತ ತಡೆಯುವ ಔಷಧಗಳು ಅಪಾಯಕಾರಿ ಎಂದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಹೂಸ್ಟನ್‌ನಲ್ಲಿರುವ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಗರ್ಭಪಾತ ತಡೆಯಲು ಬಳಸುವ ಔಷಧಿಗಳ ಸೇವನೆಯಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆಯಂತೆ. ಅಧ್ಯಯನದ ಫಲಿತಾಂಶಗಳನ್ನು ಅಮೇರಿಕನ್ ಜರ್ನಲ್ ಆಫ್ ಅಬ್ಸ್ಟೆಟ್ರಿಕ್ಸ್ ಅಂಡ್ ಗೈನೆಕಾಲಜಿಯಲ್ಲಿ ಪ್ರಕಟಿಸಲಾಗಿದೆ. 17-OHPC ಸಂಶ್ಲೇಷಿತ ಪ್ರೊಜೆಸ್ಟೋಜೆನ್ ಆಗಿದ್ದು, ಇದನ್ನು 1950 ಮತ್ತು 1960 ರ ದಶಕಗಳಲ್ಲಿ ಮಹಿಳೆಯರು ಹೆಚ್ಚಾಗಿ ಬಳಸುತ್ತಿದ್ದರು. ಇದನ್ನೂ ಈಗ್ಲೂ ಬಳಸಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಔಷಧಿಯನ್ನು ತೆಗೆದುಕೊಂಡ ಮಹಿಳೆಯರಿಗೆ ಜನಿಸಿದ ಮಕ್ಕಳು, ಔಷಧಿಯನ್ನು ತೆಗೆದುಕೊಳ್ಳದ ಮಹಿಳೆಯರಿಗೆ ಜನಿಸಿದವರಿಗಿಂತ ಎರಡು ಪಟ್ಟು ಕ್ಯಾನ್ಸರ್ ಪ್ರಮಾಣವನ್ನು ಹೊಂದಿದ್ದರಂತೆ. 1960 ರ ದಶಕದಲ್ಲಿ ಮತ್ತು ನಂತರ ಜನಿಸಿದ ಜನರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್, ಥೈರಾಯ್ಡ್ ಕ್ಯಾನ್ಸರ್ ಮತ್ತು ಇತರ ಹಲವು ಕ್ಯಾನ್ಸರ್ಗಳನ್ನು ನೋಡಿದ್ದೇವೆ ಎಂದು ಕೈಟ್ಲಿನ್ ಸಿ. ಮರ್ಫಿ ಹೇಳಿದ್ದಾರೆ.

ಜೂನ್ 1959 ಮತ್ತು ಜೂನ್ 1967 ರ ನಡುವೆ ಪ್ರಸವಪೂರ್ವ ಆರೈಕೆಯನ್ನು ಪಡೆದ ಮಹಿಳೆಯರ ಮೇಲೆ ಕೈಸರ್ ಫೌಂಡೇಶನ್ ಹೆಲ್ತ್ ಪ್ಲಾನ್ ಮತ್ತು ಕ್ಯಾಲಿಫೋರ್ನಿಯಾ ಕ್ಯಾನ್ಸರ್ ರಿಜಿಸ್ಟ್ರಿಯಿಂದ ದತ್ತಾಂಶವನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಈ ಸಮಯದಲ್ಲಿ ಹುಟ್ಟಿದ 18,751 ಮಕ್ಕಳ ಬಗ್ಗೆ ಅಧ್ಯಯನ ನಡೆದಿದೆ. ಅದ್ರಲ್ಲಿ 58 ವರ್ಷದೊಳಗಿನ 1008 ಜನರಲ್ಲಿ ಕ್ಯಾನ್ಸರ್ ಅಂಶ ಕಂಡು ಬಂದಿದೆ. ಗರ್ಭಾವಸ್ಥೆಯಲ್ಲಿ ಮಾತ್ರೆ ತೆಗೆದುಕೊಳ್ಳುವ ತಾಯಂದಿರಿಗೆ ಹುಟ್ಟುವ ಮಕ್ಕಳಲ್ಲಿ ಶೇಕಡಾ 65 ರಷ್ಟು ಜನರಿಗೆ ಕ್ಯಾನ್ಸರ್ ಕಾಣಿಸಿಕೊಳ್ತಿದೆ. 50 ವರ್ಷದೊಳಗೆ ಕ್ಯಾನ್ಸರ್ ಪತ್ತೆಯಾಗ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...