
ಜೈಪುರದ ಶಿಪ್ರಪತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇನಾ ಯೋಧರೊಬ್ಬರನ್ನು ಬಟ್ಟೆ ಬಿಚ್ಚಿ ಥಳಿಸಿದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಕೈಗಾರಿಕೆ ಮತ್ತು ಸೈನಿಕ ಕಲ್ಯಾಣ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಶಿಪ್ರಾಪತ್ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಸ್ಟ್ 11 ರಂದು ಶಿಪ್ರಾಪಾತ್ ಠಾಣೆ ಪೊಲೀಸರು ಕ್ಲಬ್ ಮೇಲೆ ದಾಳಿ ನಡೆಸಿ ಹುಕ್ಕಾ ಬಾರ್‌ನಲ್ಲಿದ್ದ ಹಲವರನ್ನು ಹಿಡಿದಿದ್ದರು.ಸೇನಾ ಯೋಧ ಅರವಿಂದ್ ಅವರ ಪರಿಚಯಸ್ಥರೂ ಇದರಲ್ಲಿ ಭಾಗಿಯಾಗಿದ್ದರು. ಅವರು ಶಿಪ್ರಾಪತ್ ಪೊಲೀಸ್ ಠಾಣೆಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕ ನಂತ್ರ ಅರವಿಂದ್ ಠಾಣೆಗೆ ತಲುಪಿ ಸಬ್ ಇನ್ಸ್‌ಪೆಕ್ಟರ್ ಬನ್ನಾ ಲಾಲ್ ಅವರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅರವಿಂದ್, ಬನ್ನಾಲಾಲ್ ತನ್ನೊಂದಿಗೆ ಚೆನ್ನಾಗಿ ವರ್ತಿಸಲಿಲ್ಲ ಮತ್ತು ನಿಂದಿಸಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ.
ತಾನು ಸೇನಾ ಯೋಧ ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದೇನೆ ಎಂದು ಎಸ್‌ಐ ಬನ್ನಾಲಾಲ್‌ಗೆ ತಿಳಿಸಿರುವುದಾಗಿ ಅರವಿಂದ್ ಹೇಳುತ್ತಾರೆ. ಆದ್ರೆ ಬನ್ನಾಲಾಲ್, ಅರವಿಂದ್ ಅವರನ್ನು ನಿಂದಿಸುತ್ತಲೇ ಥಳಿಸಿದ್ದಾರೆ. ಅಲ್ಲದೆ ಅರವಿಂದ್ ಅವರನ್ನು ಲಾಕಪ್‌ಗೆ ಹಾಕಿ, ಅವರ ಬಟ್ಟೆಗಳನ್ನು ತೆಗೆದು ಥಳಿಸಿದ್ದಾರೆ.
ಪೊಲೀಸರು ಸೇನೆಯ ಅಪ್ಪ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರಂತೆ. ಈ ಬಗ್ಗೆ ಪೀಡಿತ ಸೈನಿಕ, ಕಲ್ಯಾಣ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ದೂರು ನೀಡಿದ್ದರು.