
ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಚಿಲ್ಹ್ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಶಿವಶಂಕರ್ ಸಿಂಗ್, ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಜಿಲ್ಲಾ ಭ್ರಷ್ಟಾಚಾರ ನಿಗ್ರಹ ಅಧಿಕಾರಿ ವಿನಯ್ ಸಿಂಗ್ ನೇತೃತ್ವದಲ್ಲಿ ತಂಡವೊಂದು ಚಿಲ್ಹ್ ಪೊಲೀಸ್ ಠಾಣೆಗೆ ತೆರಳಿ ಕಾರ್ಯಾಚರಣೆ ನಡೆಸಿತು. ದೂರುದಾರರೊಬ್ಬರಿಂದ 30,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಠಾಣಾಧಿಕಾರಿ ಸಿಂಗ್ ಅವರನ್ನು ಅಧಿಕಾರಿಗಳು ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ, ಅಧಿಕಾರಿಗಳು ಠಾಣಾಧಿಕಾರಿ ಸಿಂಗ್ ಅವರನ್ನು ವಾಹನಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ಸಿಂಗ್ ವಾಹನದಲ್ಲಿ ಕೂರಲು ನಿರಾಕರಿಸುತ್ತಾರೆ. “ನನ್ನ ಮಾತನ್ನು ಕೇಳಿ, ಒಂದು ನಿಮಿಷ ನಿಲ್ಲಿ” ಎಂದು ಅವರು ಹೇಳುತ್ತಿರುವುದು ಕೇಳಿಸುತ್ತದೆ. ಅಲ್ಲದೇ ಹೈಡ್ರಾಮಾ ಮಾಡಲು ಆರಂಭಿಸಿದ್ದಾರೆ. ನಂತರ ಅಧಿಕಾರಿಗಳು ಬಲವಂತವಾಗಿ ಅವರನ್ನು ವಾಹನದಲ್ಲಿ ಕೂರಿಸುತ್ತಾರೆ.
ಈ ಘಟನೆ ನಡೆದ ಕೆಲವೇ ದಿನಗಳ ಮೊದಲು, ಜಿಗ್ನಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುರೇಂದ್ರ ಕುಮಾರ್ ಅವರು ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು.
ಈ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟುಮಾಡಿದೆ ಮತ್ತು ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
दरोगा जी रंगेहाथ रिश्वत लेते हुए पकड़े गये हैं. अब एंटी करप्शन की टीम इस घूसखोर दरोग़ा को घसीटते हुए ले जा रही है. दरोग़ा जी गिड़गिड़ा रहे हैं.
मामला यूपी के मिर्जापुर का है. यहां ज़िले के चील्ह थाना प्रभारी पकड़े गये हैं. pic.twitter.com/35WMCJMIDY
— Priya singh (@priyarajputlive) February 27, 2025