ಪೆರುವಿನಲ್ಲಿ ರೈಲ್ವೆ ಹಳಿಗಳ ಬಳಿ ಮಲಗಿದ್ದ ವ್ಯಕ್ತಿಯೊಬ್ಬ ರೈಲಿನಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಮತ್ತು ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಯುವಕ ಮದ್ಯದ ಪ್ರಭಾವದಲ್ಲಿದ್ದ ಮತ್ತು ರೈಲನ್ನು ಗಮನಿಸಲು ವಿಫಲನಾಗಿದ್ದ ಎಂದು ವರದಿಯಾಗಿದೆ. ರಾಜಧಾನಿ ಲಿಮಾದಲ್ಲಿ ನಡೆದ ಆಘಾತಕಾರಿ ಘಟನೆಯನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕ್ಯಾಮೆರಾದಲ್ಲಿ ಸೆರೆಯಾದ ಘಟನೆ
ಕಣ್ಗಾವಲು ಕ್ಯಾಮೆರಾಗಳು ನಂಬಲಾಗದ ಕ್ಷಣವನ್ನು ದಾಖಲಿಸಿವೆ. ರೈಲ್ವೆ ಹಳಿಗಳ ಪಕ್ಕದಲ್ಲಿ ವ್ಯಕ್ತಿಯೊಬ್ಬ ಯಾವುದೇ ಚಲನೆಯಿಲ್ಲದೆ ನೆಲದ ಮೇಲೆ ಮಲಗಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ನಿಧಾನವಾಗಿ ಚಲಿಸುವ ಸರಕು ಸಾಗಣೆ ರೈಲು ಸ್ಥಳಕ್ಕೆ ಆಗಮಿಸಿ ಅವನ ಮೇಲೆ ಹಾದುಹೋಗುತ್ತದೆ. ಆದಾಗ್ಯೂ,ರೈಲು ದೂರ ಹೋದ ಸ್ವಲ್ಪ ಸಮಯದ ನಂತರ ಆತ ಎದ್ದೇಳುತ್ತಾನೆ.
ಸ್ಥಳೀಯ ಅಧಿಕಾರಿಯಾದ ಜನರಲ್ ಜೇವಿಯರ್ ಅವಲೋಸ್, ಆ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಎಂದು ವಿವರಿಸಿದರು. ಅವನು ಬಹುಶಃ ಮದ್ಯಪಾನ ಮಾಡುತ್ತಿದ್ದನು ಮತ್ತು ರೈಲು ಹಳಿಗಳ ಮೇಲೆ ಮಲಗಿದ್ದ. ಇದರಿಂದಾಗಿ, ತನ್ನ ಕಡೆಗೆ ಬರುತ್ತಿರುವ ರೈಲು ಅವನಿಗೆ ಗೊತ್ತಾಗಿಲ್ಲ ಎಂದದು ಹೇಳಲಾಗಿದೆ.
A 28-year-old man miraculously survives being run over by a train in Lima, Peru, after falling asleep on the tracks. He walked away with minor injuries, believed to be under the influence at the time. #Lima #TrainIncident #MiracleSurvival #Peru #AnewZ pic.twitter.com/cnfErE1AJq
— AnewZ (@Anewz_tv) March 9, 2025