alex Certify ಭೂಕಂಪ ಪೀಡಿತ ಜಪಾನ್ ನಲ್ಲಿ ಪವಾಡ; 5 ದಿನದ ಬಳಿಕ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ 90 ವರ್ಷದ ವೃದ್ಧೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಕಂಪ ಪೀಡಿತ ಜಪಾನ್ ನಲ್ಲಿ ಪವಾಡ; 5 ದಿನದ ಬಳಿಕ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ 90 ವರ್ಷದ ವೃದ್ಧೆ….!

main img

ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ 5 ದಿನದ ಬಳಿಕ 90 ವರ್ಷದ ವೃದ್ಧೆ ಅವಶೇಷಗಳಡಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಭೀಕರ ಭೂಕಂಪ ಸಂಭವಿಸಿದ 124 ಗಂಟೆ ಬಳಿಕವೂ ಅವರು ಬದುಕುಳಿಸಿದ್ದು ಅಚ್ಚರಿಯ ಜೊತೆಗೆ ಸಂತೋಷದ ಕ್ಷಣವಾಗಿದೆ.

ಜಪಾನ್ ನ ಪಶ್ಚಿಮ ಪ್ರದೇಶದಲ್ಲಿ ಕುಸಿದ ಮನೆಯೊಂದರಲ್ಲಿ ವೃದ್ಧೆ ಜೀವಂತವಾಗಿ ಪತ್ತೆಯಾಗಿದ್ದಾರೆ. ಇಂತಹ ದುರಂತ ಸಂಭವಿಸಿದ ಮೊದಲ 72 ಗಂಟೆಗಳ ನಂತರ ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗುವುದರಿಂದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಹಂತದಲ್ಲಿದ್ದರು. ಆದಾಗ್ಯೂ ಇಶಿಕಾವಾ ಪ್ರಾಂತ್ಯದ ಸುಜು ಸಿಟಿಯಲ್ಲಿ ವೃದ್ಧೆ ಅವಶೇಷಗಳಿಂದ ಜೀವಂತವಾಗಿ ಪತ್ತೆಯಾಗುವ ಮೂಲಕ ಸಾವನ್ನು ಗೆದ್ದಿದ್ದರು.

ವರದಿಗಳ ಪ್ರಕಾರ AFP ತಂಡವು ದುರತಂದ ಸ್ಥಳದಲ್ಲಿ ಸ್ವಚ್ಛಗೊಳಿಸುವ ಕಾರ್ಯಾಚರಣೆಯನ್ನು ಚಿತ್ರೀಕರಿಸುತ್ತಿರುವಾಗ ನಾಯಿಯೊಂದು ಬೊಗಳಿದೆ. ಅವಶೇಷಗಳ ಅಡಿಯಲ್ಲಿ ಯಾರೋ ಜೀವಂತವಾಗಿದ್ದಾರೆ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನಾಯಿ ಸೂಚಿಸಿ ರಕ್ಷಣಾ ತಂಡಗಳ ಗಮನ ಸೆಳೆದಿದೆ. ಆಗ ಅವಶೇಷಗಳಡಿ ಪರಿಶೀಲಿಸಿದಾಗ 90 ವರ್ಷದ ಅಜ್ಜಿ ಜೀವಂತವಾಗಿ ಪತ್ತೆಯಾಗಿದ್ದಾರೆ.

ವಿಪತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಾಯಿಗಳಿಗೆ ಅವಶೇಷಗಳಡಿ ಮನುಷ್ಯರಿದ್ದರೆ ಬೊಗಳುವಂತೆ ತರಬೇತಿ ನೀಡಲಾಗುತ್ತದೆ. ಅದರಂತೆ ತರಬೇತಿ ಪಡೆದಿದ್ದ ನಾಯಿ ಅವಶೇಷಗಳಡಿ ವೃದ್ಧೆಯನ್ನು ನೋಡಿದಾಗ ಬೊಗಳಿದೆ.

ಇಶಿಕಾವಾ ಪ್ರದೇಶದಲ್ಲಿ ಸುಮಾರು 30,000 ಮನೆಗಳು ಇನ್ನೂ ವಿದ್ಯುತ್ ಇಲ್ಲದೆ ಕತ್ತಲಿನಲ್ಲಿವೆ. ಇಶಿಕಾವಾ ಮತ್ತು ಇತರ ಎರಡು ಪ್ರದೇಶಗಳಲ್ಲಿ 89,800 ಮನೆಗಳಿಗೆ ನೀರಿನ ಸಂಪರ್ಕವಿಲ್ಲದೆ ನೂರಾರು ಜನರು ಸರ್ಕಾರಿ ಆಶ್ರಯದಲ್ಲಿ ವಾಸಿಸುತ್ತಿದ್ದಾರೆ.

ಹೊಸವರ್ಷದ ಆರಂಭದಲ್ಲಿ ಜಪಾನ್ ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಇದುವರೆಗೂ ಸತ್ತವರ ಸಂಖ್ಯೆ 126ಕ್ಕೆ ಏರಿದೆ. ಕಠಿಣ ಚಳಿಗಾಲದ ಪರಿಸ್ಥಿತಿಯಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದ್ದು 210 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...