ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಂಡಿರುವ ನಡುವೆಯೇ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿರುವ ಬೀರಲಿಂಗೇಶ್ವರ ದೇಗುಲದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.
ದೇವಸ್ಥಾನದ ಆವರಣದಲ್ಲಿ ಬೀರಲಿಂಗೇಶ್ವರನಿಗೆ ನೈವೇದ್ಯ ಅರ್ಪಿಸುವ ಸಲುವಾಗಿ ಹುಗ್ಗಿ ತಿನಿಸನ್ನು ತಯಾರಿಸಲಾಗುತ್ತಿತ್ತು. ಆದರೆ ಜೋರಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಒಲೆಯ ಮೇಲೆ ಬೇಯುತ್ತಿದ್ದ ಪಾತ್ರೆಯನ್ನು ಹಾಗೆ ಬಿಟ್ಟು ಭಕ್ತರು ಅಲ್ಲಿಂದ ಬೇರೆ ಸ್ಥಳಕ್ಕೆ ಬಂದಿದ್ದಾರೆ.
ಆದರೆ ಪವಾಡ ಎಂಬಂತೆ ಧಾರಾಕಾರ ಮಳೆಯ ನಡುವೆಯೂ ಒಲೆ ಮಾತ್ರ ಆರಲೇ ಇಲ್ಲ. ವರುಣ ಭೋರ್ಗರೆಯುತ್ತಿದ್ದರೂ ಒಲೆಯ ಮೇಲೆ ದೇವರ ನೈವೇದ್ಯಕ್ಕೆ ತಯಾರಾಗುತ್ತಿದ್ದ ಹುಗ್ಗಿ ಮಾತ್ರ ಯಾವುದೇ ಅಡಚಣೆ ಇಲ್ಲದೆಯೇ ಬೆಂದಿದೆ. ಇದನ್ನು ಕಂಡ ಭಕ್ತ ವೃಂದವು ಇದು ದೇವರ ಪವಾಡವೇ ಸರಿ ಎಂದು ಮಾತನಾಡಿಕೊಳ್ತಿದ್ದಾರೆ.
https://youtu.be/EtRzrSk8ooY?t=12