
ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಂಚಲನ ಸೃಷ್ಟಿಸಿರುವ ವೇಟ್‌ಲಿಫ್ಟರ್ ಮೀರಾಬಾಯ್ ಚಾನು ಈಗ ಎಲ್ಲೆಲ್ಲೂ ಸುದ್ದಿಯಲ್ಲಿದ್ದಾರೆ.
ವೇಟ್‌ಲಿಫ್ಟಿಂಗ್ ಶಿಸ್ತಿನ ವೇಳೆ ವಿಶಿಷ್ಟವಾದ ಓಲೆಗಳನ್ನು ಧರಿಸಿಕೊಂಡು ಬಂದಿದ್ದ ಮೀರಾಬಾಯ್‌ರ ಫ್ಯಾಶನ್ ಬಗ್ಗೆಯೂ ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಒಲಂಪಿಕ್ ಉಂಗುರಗಳಂತೆ ಕಾಣುತ್ತಿದ್ದ ಮೀರಾಬಾಯ್‌ರ ಕಿವಿಯೋಲೆಗಳು ಗಮನ ಸೆಳೆಯುತ್ತಿದ್ದವು.
ಒಮ್ಮೆ ತಿಂದು ನೋಡಿ ಈ ದೋಸೆ ʼಪಿಜ್ಜಾ’
ಈ ಕುರಿತು ಮಾತನಾಡಿದ ಮೀರಾಬಾಯ್ ತಾಯಿ ಸಾಯ್ಕೋಮ್ ಲೈಮಾ, “ನಾನು ಆಕೆಯ ಕಿವಿಯೋಲೆಗಳನ್ನು ಟಿವಿಯಲ್ಲಿ ನೋಡಿದೆ. ರಿಯೋ ಒಲಂಪಿಕ್ಸ್‌ಗೆ (2016) ಮುನ್ನ ನಾನು ಆಕೆಗೆ ಈ ಓಲೆಗಳನ್ನು ಕೊಟ್ಟಿದ್ದೆ. ನನ್ನಲ್ಲಿದ್ದ ಉಳಿತಾಯ ಹಾಗೂ ಚಿನ್ನದ ಚೂರುಗಳಿಂದ ಆ ಓಲೆಗಳನ್ನು ಮಾಡಿಸಿದ್ದೆ, ಇದರಿಂದ ಆಕೆಗೆ ಅದೃಷ್ಟ ಒಲಿಯಲಿ ಎಂಬ ಆಶಯದಿಂದ” ಎಂದಿದ್ದಾರೆ.
ಒಲಂಪಿಕ್ಸ್ ಮೊದಲ ದಿನವೇ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಪದಕ ಒಲಿಯುವಂತೆ ಮಾಡಿದ ತಮ್ಮ ಯಶಸ್ಸಿನ ಹಿಂದೆ ತಾಯಿ ಕೊಟ್ಟ ಕಿವಿಯೋಲೆಗಳ ಲಕ್ಕಿ ಚಾರ್ಮ್ ಸಹ ಕೆಲಸ ಮಾಡಿದೆ ಎಂದು ಮೀರಾಬಾಯ್ ತಿಳಿಸುತ್ತಾರೆ.