ಟೋಕಿಯೋ ಒಲಿಂಪಿಕ್ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಪದಕವನ್ನ ತಂದುಕೊಟ್ಟ ಮೀರಾಬಾಯಿ ಚಾನುರ ಸಾಧನೆಯನ್ನ ಇಡೀ ದೇಶವೇ ಕೊಂಡಾಡುತ್ತಿದೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಚಾನುರ ಸಾಧನೆಯನ್ನ ಇಡೀ ದೇಶವೇ ಕೊಂಡಾಡುತ್ತಿರುವ ಈ ವಿಶೇಷ ಸಂದರ್ಭದಲ್ಲಿ ಚಾನು ಕುಟುಂಬಸ್ಥರ ಸಂಭ್ರಮಾಚರಣೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಮೀರಾಬಾಯಿ ಸಾಧನೆಯ ವಿಚಾರವಾಗಿ ಮಾತನಾಡಿದ ಸಹೋದರ, ಮೀರಾಬಾಯಿ ಸಾಧನೆಯ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಮೀರಾಬಾಯಿ ಚಿನ್ನದ ಪದಕವನ್ನ ಗೆಲ್ಲಬೇಕು ಎಂದು ನಾವೆಲ್ಲ ಆಸೆ ಪಟ್ಟಿದ್ದೆವು. ಬೆಳ್ಳಿ ಪದಕ ಜಯಿಸಿದಕ್ಕೆ ನಮಗೆ ಹೆಮ್ಮೆ ಇದೆ. ಇದು ಮಣಿಪುರಕ್ಕೆ ಮೊದಲ ಬೆಳ್ಳಿ ಪದಕವಾಗಿದೆ ಹಾಗೂ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚೊಚ್ಚಲ ಪದಕವಾಗಿದೆ ಎಂದು ಹೇಳಿದ್ರು.
ಮೀರಾಬಾಯಿ ಚಾನುರ ಸಾಧನೆಗೆ ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್ ಕೂಡ ಶುಭಾಶಯ ಕೋರಿದ್ದಾರೆ. ಪದಕ ವಿಜೇತೆ ಮೀರಾಬಾಯಿ ಚಾನು ಅವರಿಗೆ ಶುಭಾಶಯಗಳು. ಪ್ರಧಾನಿ ಮೋದಿ ಹಾಗೂ ಸಂಪೂರ್ಣ ದೇಶದ ಪರವಾಗಿ ನಿಮಗೆ ಧನ್ಯವಾದಗಳು. ನೀವು 135 ಕೋಟಿ ಭಾರತೀಯ ಜನತೆಯ ಮುಖದಲ್ಲಿ ಸಂತಸ ಮೂಡಲು ಕಾರಣರಾಗಿದ್ದೀರಿ. ಮೊದಲ ದಿನವೇ ಮೊದಲ ಪದಕ, ಬೆಳ್ಳಿ ಪದಕ ಎಂದು ಹೇಳಿದ್ದಾರೆ.
ಒಲಿಂಪಿಕ್ನಲ್ಲಿ ವೇಟ್ಲಿಫ್ಟಿಂಗ್ನಲ್ಲಿ ಭಾರತ ಇದುವರೆಗೆ ಗೆದ್ದ 2ನೇ ಪದಕ ಇದಾಗಿದೆ. ಕರ್ಣಮ್ ಮಲ್ಲೇಶ್ವರಿ 2000ನೇ ಸಾಲಿನ ಸಿಡ್ನಿ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದರು.
https://twitter.com/i/status/1418833399301672963