ಮೀರಾಬಾಯಿ ಚಾನು, ರಾಷ್ಟ್ರದ ಕ್ರೀಡಾಕ್ಷೇತ್ರಕ್ಕೆ ಮೆರಗು ತಂದಾಕೆ. ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ ಸ್ಪರ್ಧೆಯಲ್ಲಿ ರಜತ ಪದಕ ವಿಜೇತರಾದ ಈಕೆ ಈಗ ಟ್ರಕ್ ಚಾಲಕರನ್ನು ಹುಡುಕುತ್ತಿದ್ದಾರೆಂಬ ಅಚ್ಚರಿ ಸುದ್ದಿಯೊಂದು ಬಂದಿದೆ.
ತನಗೆ ಮನೆಯಿಂದ ನಿತ್ಯ ತರಬೇತಿ ಕೇಂದ್ರಕ್ಕೆ ತೆರಳಲು ಉಚಿತವಾಗಿ ಕರೆದೊಯ್ದ ಟ್ರಕ್ ಚಾಲಕರನ್ನು ಈಕೆ ಹುಡುಕುತ್ತಿದ್ದಾಳೆ.
ನೊಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಆಕೆಯ ಮನೆಯಿಂದ ಇಂಫಾಲ್‌ನ ಖುಮಾನ್ ಲಂಪಾಕ್ ಕ್ರೀಡಾ ಸಂಕೀರ್ಣದಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳಲು ಟ್ರಕ್ ಚಾಲಕರು ನೆರವಾಗಿದ್ದರಂತೆ.
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ನಂತರ ಮೀರಾಬಾಯಿ ಚಾನು ತಾನು ಸಾಗಿ ಬಂದ ಹಾದಿಯತ್ತ ಹಿಂದಿರುಗಿ ನೋಡಿದ್ದು, ತನಗೆ ಸಹಾಯ ಮಾಡಿದವರನ್ನು ನೆನಪಿಸಿಕೊಳ್ಳುತ್ತಿದ್ದಾಳೆ.
ಶಾಕಿಂಗ್…..! ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ
ತನಗೆ ನೆರವಾದ ಟ್ರಕ್ ಚಾಲಕರನ್ನು ಭೇಟಿ ಮಾಡಿ ಯಾವುದೇ ರೀತಿಯಲ್ಲಿ ಅವರಿಗೆ ಸಹಾಯ ಮಾಡಲು ಆಕೆ ಬಯಸಿದ್ದು, ಕಷ್ಟದ ಸಮಯದಲ್ಲಿ ಅವರು ನನಗೆ ನಿಜವಾಗಿಯೂ ಸಹಾಯ ಮಾಡಿದರು. ನಾನು ಅವರನ್ನು ಹುಡುಕುತ್ತಿದ್ದೇನೆ ಎಂದಿದ್ದಾಳಾಕೆ.
ಚಾನು ತಾಯಿ ಸೈಖೋಮ್ ಒಂಗ್ಬಿ ತೊಂಬಿ ದೇವಿ ಗ್ರಾಮದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದಾರೆ. ಆಕೆ ಪ್ರಕಾರ, ಟ್ರಕ್‌ಗಳು ಎಥಮ್ ಮೊಯರಂಗಪುರೆಲ್ ಪ್ರದೇಶವು ಈ ಹಳ್ಳಿಯ ಮೂಲಕ ಹಾದು ಹೋಗುತ್ತದೆ ಮತ್ತು ಟ್ರಕ್‌ಗಳು ಆಕೆಯ ಅಂಗಡಿಯ ಮುಂದೆ ನಿಲ್ಲುತ್ತದೆ.