ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದರಿಂದ ಬೇಸಿಗೆಯಲ್ಲಿ ದೇಹಾರೋಗ್ಯವನ್ನು ಕಾಪಾಡಬಹುದು. ಇದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…?
ಪುದೀನಾ ಸೊಪ್ಪಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ. ಮೊಡವೆ, ಬಿಸಿಲಿನ ಕಲೆ, ನಿಸ್ತೇಜ ತ್ವಚೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತ್ವಚೆಯನ್ನು ಶುದ್ದೀಕರಿಸುತ್ತವೆ.
ಸೌತೆಕಾಯಿಯಂತೆ ಪುದೀನಾ ಕೂಡಾ ತ್ವಚೆಗೆ ಮಾಯಿಶ್ಚರೈಸ್ ಮಾಡುತ್ತದೆ. ಪುದೀನಾ ರಸದೊಂದಿಗೆ ಜೇನು ಅಥವಾ ಮೊಸರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಹೆಚ್ಚಿನ ಪರಿಣಾಮ ಬೀರುತ್ತದೆ.
ನಿತ್ಯವೂ ಇದನ್ನು ಹಚ್ಚಿಕೊಂಡರೆ ತ್ವಚೆ ಬಿಳುಪಾಗುತ್ತದೆ. ಬೇಸಿಗೆಯಲ್ಲಿ ಇದನ್ನು ಬಳಸುವುದರಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.
ಬಿಸಿಲಿನ ಕಾರಣಕ್ಕೆ ಅಥವಾ ಉಷ್ಣದಿಂದಾದ ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ಹೀಗೆ ಬಹುಪಯೋಗಿಯಾರುವ ಪುದೀನಾ ಸೊಪ್ಪನ್ನು ಆಹಾರದ ಮೂಲಕ ಸೇವಿಸಿಯೂ ನಿಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ.