ರಾಯಚೂರು: ಅಲ್ಪಸಂಖ್ಯಾತರ ಸಮುದಾಯಕ್ಕೆ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಸೇರಿದ ವಿದ್ಯಾರ್ಥಿಗಳಿಂದ 2019-20 ನೇ ಸಾಲಿಗೆ ಪ್ರೀ-ಮೆಟ್ರಿಕ್, ಪೋಸ್ಟ್-ಮೆಟ್ರಿಕ್ ಮತ್ತು ಮೆರಿಟ್-ಕಮ್-ಮೀನ್ಸ್ ರಾಜ್ಯ ವಿದ್ಯಾರ್ಥಿ ವೇತನಕ್ಕಾಗಿ(ಎಸ್.ಎಸ್.ಪಿ) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರೀ-ಮೆಟ್ರಿಕ್ ಹಾಗೂ ಪೋಸ್ಟ್-ಮೆಟ್ರಿಕ್ ಮತ್ತು ಮೆರಿಟ್-ಕಮ್-ಮೀನ್ಸ್ ಅರ್ಜಿ 2021 ಜೂ. 20 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಭರ್ತಿ ಅರ್ಜಿಯನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಅರ್ಜಿಗಳ ಮೇಲೆ ಸಂಬಂಧಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರು ಅಥವಾ ಕಾಲೇಜು ಪ್ರಾಂಶುಪಾಲರಿಂದ ಧೃಡೀಕರಿಸಬೇಕು, ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ವಿದ್ಯಾರ್ಥಿಯ ಮತ್ತು ಪೋಷಕರ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಕಳೆದ ಸಾಲಿನ ಅಂಕಪಟ್ಟಿ, ಹಣ ಸಂದಾಯ ಮಾಡಿದ ರಶೀದಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಮೊಬೈಲ್ ಸಂಖ್ಯೆ, ವಿದ್ಯಾರ್ಥಿಯಎನ್.ಎಸ್.ಪಿ ಐ.ಡಿ, ವಿದ್ಯಾರ್ಥಿಗಳ ಎಸ್.ಟಿ.ಎಸ್ ನಂಬರ್ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಕೇಂದ್ರಗಳಿವು:
ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ದೂರವಾಣಿ ಸಂಖ್ಯೆ: 08532-226555, ಲಿಂಗಸುಗೂರು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಸಂಖ್ಯೆ: 8884977648, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಸಂಖ್ಯೆ: 8217621732, ದೇವದುರ್ಗ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಸಂಖ್ಯೆ: 9148233616, ಮಾನವಿ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಸಂಖ್ಯೆ: 8073444099ಗೆ ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.