ಮಳೆ ಚೆನ್ನಾಗಿ ಆಗಲಿ ಎಂದು ಕಪ್ಪೆಗಳ ಮೆರವಣಿಗೆ ಮಾಡಿಸುವ ಮೌಢ್ಯವನ್ನು ಖಂಡಿಸಲಾಗುತ್ತಿರುವ ಈ ಕಾಲದಲ್ಲಿ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಮನೆಮನೆಗೆ ಭಿಕ್ಷೆಗೆ ಕಳುಹಿಸುವ ವಿಚಿತ್ರ ಪದ್ಧತಿ ಇದೆ ಎಂದರೆ ನಿಮಗೆ ಹೇಗಾಗಬೇಡ !
ಹೌದು, ಮಳೆಯ ದೇವತೆಯನ್ನು ಸಂತುಷ್ಟಪಡಿಸಲು ಮಧ್ಯಪ್ರದೇಶದ ದಾಮೊಹ್ ಜಿಲ್ಲೆಯ ಬನಿಯಾ ಗ್ರಾಮದಲ್ಲಿ ಈ ಮೌಢ್ಯ ನಡೆಯುತ್ತಲೇ ಬಂದಿದೆ.
ಕನಿಷ್ಠ ಆರು ಹೆಣ್ಣುಮಕ್ಕಳನ್ನು ಪ್ರತಿ ವರ್ಷ ಬೆತ್ತಲಾಗಿಸಿ, ಗ್ರಾಮಸ್ಥರು ಹುಚ್ಚಾಟ ಮೆರೆಯುತ್ತಿದ್ದಾರೆ. ಈ ಅನಿಷ್ಟ ಪದ್ಧತಿಯಿಂದ ಬರಗಾಲವು ಗ್ರಾಮದ ಸುತ್ತಲು ಸುಳಿಯುವುದೇ ಇಲ್ಲ ಎನ್ನುವುದು ಇವರ ಬಹುಕಾಲದ ನಂಬಿಕೆಯಂತೆ.
ವಿಧವೆ ಗರ್ಭಿಣಿಯಾದ ಬಳಿಕ ಬಯಲಾಯ್ತು ಪ್ರಿಯಕರನ ಅಸಲಿಯತ್ತು
ಕಪ್ಪೆಯೊಂದನ್ನು ನಗ್ನ ಹೆಣ್ಣುಮಕ್ಕಳ ಹೆಗಲ ಮೇಲಿನ ಕಟ್ಟಿಗೆಯೊಂದಕ್ಕೆ ಕಟ್ಟಲಾಗಿರುತ್ತದೆ. ನಗ್ನ ಮೆರವಣಿಗೆಯಲ್ಲಿ ಗ್ರಾಮದ ಇತರ ಹೆಂಗಸರು ಭಜನೆಗಳನ್ನು ಹಾಡುತ್ತಾ ಸಾಗುತ್ತಾರಂತೆ. ಇಂಥದ್ದೊಂದು ಆಚರಣೆಯ ಸುಳಿವು ಸಿಕ್ಕ ಕೂಡಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‍ಸಿಪಿಸಿಆರ್) ಜಾಗೃತವಾಗಿದ್ದು, ಗ್ರಾಮಕ್ಕೆ ಭೇಟಿ ನೀಡಿ ಅನಿಷ್ಟ ಪದ್ಧತಿಗೆ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿಗೆ ಖಡಕ್ ಸೂಚನೆ ನೀಡಿದೆ.
ಈ ಬಗ್ಗೆ ಕೂಲಂಕಷ ವರದಿಗೂ ಆಗ್ರಹಿಸಿದೆ. ಇದೊಂದು ಸನಾತನ ಆಚರಣೆ ಎಂದು ಗ್ರಾಮಸ್ಥರು ಪಾಲಿಸಿಕೊಂಡು ಬಂದಿರುವ ಕಾರಣ ಜಿಲ್ಲೆಯಲ್ಲಿ ಯಾರೂ ಕೂಡ ಈ ಬಗ್ಗೆ ದೂರು ನೀಡಿಲ್ಲ ಎಂದು ಜಿಲ್ಲಾಧಿಕಾರಿ ಸಮರ್ಥನೆ ಕೊಟ್ಟಿದ್ದಾರೆ.