alex Certify ಪ್ರೀತಿಸುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ

ರಾಮನಗರ: ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಿರಂತರ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ಬಾಲಕಿಯನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡ ಚನ್ನಪಟ್ಟಣದ ಯುವಕ ಆಕಾಶ್ ಆಕೆಯ ಮೊಬೈಲ್ ಸಂಖ್ಯೆ ಪಡೆದು ಪ್ರೀತಿಸುವುದಾಗಿ ನಂಬಿಸಿದ್ದಾನೆ. ಬಸ್ ನಲ್ಲಿ ಚನ್ನಪಟ್ಟಣಕ್ಕೆ ಕರೆಸಿಕೊಂಡು ಮಂಗಳವಾರಪೇಟೆ ಸಮೀಪ ಇರುವ ಲಾಡ್ಜ್ ನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ತಾನು ಅಪ್ರಾಪ್ತೆ ಎಂದು ಬಾಲಕಿ ಹೇಳಿದ್ದರೂ ಆಕೆಯೊಂದಿಗೆ ನಾಲ್ಕೈದು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಜನವರಿ 16ರಂದು ಬಾಲಕಿ ಮನೆಯಲ್ಲಿ ಹೊಟ್ಟೆ ನೋವು ಎಂದು ಹೇಳಿದ್ದು, ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರಿಶೀಲಿಸಿದಾಗ ಗರ್ಭಿಣಿ ಆಗಿರುವುದು ಪತ್ತೆಯಾಗಿದೆ. ಪೋಷಕರು ಬಾಲಕಿ ಬಳಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ನಂತರ ದೂರು ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...