ಬೆಂಗಳೂರು: ವ್ಯಕ್ತಿಯೊಬ್ಬ ಪಡೆದ ಸಾಲದ ಬಾಕಿ ತೀರಿಸಿಲ್ಲ ಎಂದು ಆತನ ಅಪ್ರಾಪ್ತ ಮಗಳ ಮೇಲೆ ಕಾಮುಕ ಅಟ್ಟಹಾಸ ಮೆರೆದು ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ರವಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. 40 ಸಾವಿರ ರೂಪಾಯಿ ಸಾಲದ ಬಾಕಿ ಮೊತ್ತ ತೀರಿಸಿಲ್ಲ ಎಂದು ಕಾಮುಕ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಾನೆ.
ಆರೋಪಿ ಬಳಿ ಬಾಲಕಿ ತಂದೆ 70 ಸಾವಿರ ರೂಪಾಯಿ ಸಾಲ ಪಡೆದಿದ್ದರಂತೆ. 30 ಸಾವಿರ ರೂಪಾಯಿ ಸಾಲ ಹಿಂತಿರುಗಿಸಿದ್ದರಂತೆ. ಆದರೆ 40 ಸಾವಿರ ರೂಪಾಯಿ ಬಾಕಿ ಸಾಲ ತೀರಿಸಲು ಆಗಿರಲಿಲ್ಲ. 40 ಸಾವಿರಕ್ಕೆ ಬಡ್ಡಿ ಹಣ ನೀಡಿಲ್ಲ ಎಂದು ಸಾಲ ಪಡೆದಿದ್ದ ವ್ಯಕ್ತಿಯ ಅಪ್ರಾಪ್ತ ಮಗಳ ಮೇಲೆ ರವಿಕುಮಾರ್ ಹಾಡಹಗಲೇ ಅತ್ಯಾಚಾರವೆಸಗಿದ್ದಾನೆ. ಸದ್ಯ ಕಾಮುಕನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.