ತೆಲಂಗಾಣದಲ್ಲಿ 13 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಮಹಬೂಬಾಬಾದ್ ಜಿಲ್ಲೆಯ ಮಾರಿಪೇಡಾ ಮಂಡಲದ ಅಬ್ಬೈಪಾಲೆಂ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಈ ದುರಂತ ಸಂಭವಿಸಿದೆ.
ಮೃತಳನ್ನು ಬೋಡಾ ಶ್ರವಂತಿ ಎಂದು ಗುರುತಿಸಲಾಗಿದ್ದು, 6 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಮೂಲಗಳ ಪ್ರಕಾರ ಗುರುವಾರ ರಾತ್ರಿ ಶ್ರವಂತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗ ಆಕೆಯ ಕುಟುಂಬವು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲು ಮುಂದಾಗಿತ್ತು.
ದುರದೃಷ್ಟವಶಾತ್ ಅವರು ವೈದ್ಯರ ಬಳಿ ಹೋಗುವ ಮೊದಲೇ ಆಕೆ ತನ್ನ ಅಜ್ಜಿಯ ಮನೆಯಲ್ಲಿ ಕುಸಿದು ಬಿದ್ದಳು. ಆಕೆಯನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಳು.