ಆನ್ಲೈನ್ ಗೇಮ್‌ಗಳಾದ ಫ್ರೀ ಫೈರ್ ಪಬ್‌ಜಿ ಡ್ರಾಗನ್ ಸ್ಕ್ವಾಡ್ ಮತ್ತು ತೀನ್ ಪಟ್ಟಿಗಳ ಚಟ ಅಂಟಿಸಿಕೊಂಡಿರುವ ಬಾಲಕನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಂದು ಹೂತು ಹಾಕಿದ್ದಾನೆ. ಬಾಲಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ತನ್ನ ಸಹೋದರನ ಕೊಲೆ ಮಾಡಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಹುಸಿ ಐಡಿ ಸೃಷ್ಟಿಸಿದ ಆಪಾದಿತ, ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ಐದು ಲಕ್ಷ ರೂಪಾಯಿಗಳ ಬೇಡಿಕೆ ಮುಂದಿಟ್ಟಿದ್ದ ಎಂದು ನಗೌರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.
ಇಲ್ಲಿನ ಲಡ್ನು ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 9ರಂದು ದೂರು ದಾಖಲಿಸಲಾಗಿದ್ದು, 12 ವರ್ಷದ ಬಾಲಕ, ಡಿಸೆಂಬರ್ 8ರಂದು ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಮನೆಯಿಂದ ಹೋದವನು ಮರಳಿ ಬರಲೇ ಇಲ್ಲ ಎಂದು ತಿಳಿಸಲಾಗಿತ್ತು.
BREAKING NEWS: ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ಇನ್ನಿಲ್ಲ
ಇದರ ಬೆನ್ನಿಗೇ ವ್ಯಾಪಕ ಶೋಧ ನಡೆಸಿದ ಪೊಲೀಸರು ತಪ್ಪಿಸಿಕೊಂಡಿದ್ದ ಬಾಲಕನ ಕಂಡು ಹಿಡಿಯಲು ವಿಶೇಷ ತಂಡ ರಚಿಸಿ ಸೈಬರ್ ಘಟಕದ ನೆರವಿನೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ.
ಘಟನೆ ನಡೆದ ಎರಡನೇ ದಿನ, ಅಸ್ಸಾಂನಲ್ಲಿರುವ ತಪ್ಪಿಸಿಕೊಂಡಿದ್ದ ಬಾಲಕನ ಚಿಕ್ಕಪ್ಪನಿಗೆ ಐದು ಲಕ್ಷ ರೂಪಾಯಿ ಬೇಡಿಕೆಯ ಕರೆ ಬಂದಿದೆ. ಈ ವಿಷಯ ತಿಳಿದ ಕೂಡಲೇ ಠಾಣಾಧಿಕಾರಿ ರಾಜೇಂದ್ರ ಸಿಂಗ್, ಕರೆ ಮಾಡಿದಾತನನ್ನು ಹಾಗೇ ಲೈನ್‌ನಲ್ಲಿ ಇರುವಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ಇದೇ ವೇಳೆ, ಇನ್‌ಸ್ಟಾಗ್ರಾಂ ಐಡಿ ರಚಿಸಿದ ಐಪಿ ವಿಳಾಸ ಕಂಡುಕೊಂಡ ಸೈಬರ್ ಘಟಕ, ಘಟನಾ ಸ್ಥಳ ಅಪಹರಿಸಲಾದ ಬಾಲಕನ ಊರೇ ಆಗಿದೆ ಎಂದು ಅರಿತುಕೊಂಡಿತು.
BIG BREAKING: ಒಮಿಕ್ರಾನ್ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?
ಇದರ ಬೆನ್ನತ್ತಿ ಬಾಲಕನನ್ನು ಮಾನಸಿಕವಾಗಿ ತನಿಖೆ ನಡೆಸಿದ ಪೊಲೀಸರು, ಆತನಿಂದ ಸತ್ಯ ಬಾಯಿ ಬಿಡಿಸಿದ್ದಾರೆ. ತಾನು ಹಾಗೂ ತನ್ನ ಸಹೋದರ ಆನ್ಲೈನ್‌ನಲ್ಲಿ ಗೇಮ್ ಆಡುವ ಗೀಳು ಅಂಟಿಸಿಕೊಂಡು, ಟೋಕನ್ ರೂಪದಲ್ಲಿ ಈ ಆಟಗಳನ್ನು ಆಡಲು ಪೇಮೆಂಟ್ ಮಾಡಬೇಕಿದ್ದಾಗಿ ತಿಳಿಸಿದ್ದಾನೆ. ಘಟನೆ ನಡೆದ ದಿನ ತಾನು ಹಾಗೂ ಕಾಣೆಯಾಗಿದ್ದ 12 ವರ್ಷದ ತನ್ನ ಸಹೋದರ ಹೊಲವೊಂದಕ್ಕೆ ತೆರಳಿದ್ದಾಗಿ ಹೇಳಿದ್ದಾನೆ. ಆನ್ಲೈನ್ ಪೇಮೆಂಟ್ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಬಾಲಕನನ್ನು ಆಪಾದಿತ ಕತ್ತು ಹಿಸುಕಿ ಸಾಯಿಸಿದ್ದಾನೆ. ಸಿಕ್ಕಿ ಬೀಳುವ ಭಯದಲ್ಲಿ ಬಾಲಕನ ದೇಹವನ್ನು ಮಣ್ಣಿನಲ್ಲಿ ಹೂಳಿದ್ದಾನೆ.
ಆನ್ಲೈನ್ ಗೇಮ್‌ಗಳನ್ನು ಆಡಲು ಬೇಕಾದ ರೀಚಾರ್ಜ್ ಮೊತ್ತವನ್ನು ಮೃತ ಬಾಲಕನ ಅಪ್ಪನಿಂದ ಸುಲಿಗೆ ಮಾಡಲು ಮುಂದಾದ ಆರೋಪಿ, ಇನ್‌ಸ್ಟಾಗ್ರಾಂನಲ್ಲಿ ಹುಸಿ ಐಡಿ ಸೃಷ್ಟಿಸಿ ಹೀಗೆ ಕರೆ ಮಾಡಿ ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ.
ವಶಕ್ಕೆ ಪಡೆದ ಆರೋಪಿ ಬಾಯಿಬಿಟ್ಟ ಬಳಿಕ ಅವರ ಕೈಯಲ್ಲಿದ್ದ ಮೊಬೈಲ್‌ಗಳು ಹಾಗೂ ಮೃತಪಟ್ಟ ಬಾಲಕನ ದೇಹವನ್ನು ಕಂಡುಹಿಡಿಯಲಾಗಿದೆ.