ಅಲೆಮಾರಿ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಚಿತ್ರಹಿಂಸೆ ಕೊಟ್ಟು, ಮಹಿಳೆಯರ ಬಟ್ಟೆಗಳು ಹಾಗೂ ಬಳೆಗಳನ್ನು ಧರಿಸಲು ಹೇಳಿ 15 ಜನರ ತಂಡವೊಂದು ಟಾರ್ಚರ್ ಕೊಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಸಿಕರ್ನಲ್ಲಿ ರೆಕಾರ್ಡ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ಬಾಲಕನ ಕುಟುಂಬ ಸದಸ್ಯರು ಪೊಲೀಸ್ ಇಲ್ಲಿನ ಪಟನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರು ಲ್ಯಾಂಡ್ ಮಾಫಿಯಾ ಕುರಿತು ಸ್ಫೋಟಕ ಸಂಗತಿ ಹೇಳಿದ್ದ ರೋಹಿಣಿ ಸಿಂಧೂರಿ ಆಡಿಯೋ ಬಹಿರಂಗ
ಸಮೀಪದ ಕಿಶೋರ್ಪುರದಲ್ಲಿ ಬಾಲಕನನ್ನು ಒತ್ತೆಯಾಗಿಟ್ಟುಕೊಂಡು ಆತನಿಗೆ ಭಾರೀ ಅಪಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಆಗುಂತಕರು ಆ ಬಾಲಕನ ಸಹೋದರನಿಗೆ ಕರೆ ಮಾಡಿ ದುಡ್ಡಿಗೆ ಬೇಡಿಕೆಯನ್ನೂ ಇಟ್ಟಿದ್ದರೆನ್ನಲಾಗಿದೆ. ಸದ್ಯ ಬಾಲಕ ಆತನ ಕುಟುಂಬವನ್ನು ಕೂಡಿಕೊಂಡಿದ್ದಾನೆ.
ಪ್ರಾಣಾಯಾಮದಿಂದ ಆಮ್ಲಜನಕ ಪಡೆಯಿರಿ
ಆ ಅಪ್ರಾಪ್ತ ವಯಸ್ಸಿನ ಬಾಲಕ, ಹುಡುಗಿಯೊಬ್ಬಳೊಂದಿಗೆ ಓಡಿ ಹೋಗಲು ಯತ್ನಿಸಿದ ವೇಳೆ ಆ ಗುಂಪು ಈತನನ್ನು ಹಿಡಿದುಕೊಂಡು ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.