ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊರವಲಯದಲ್ಲಿ ಸುಮಾರು 287 ಕಿಲೋಮೀಟರ್ ಉದ್ದದ ವೃತ್ತಾಕಾರದ ರೈಲು ಜಾಲ ಅಭಿವೃದ್ಧಿಪಡಿಸಲು ರೈಲ್ವೆ ಮಂತ್ರಾಲಯ ಮುಂದಾಗಿದೆ.
ಈ ವೃತ್ತಾಕಾರದ ರೈಲು ಜಾಲ ಬೆಂಗಳೂರು ನಗರದ ಸುತ್ತಲಿನ ನಿಡವಂಡ –ದೊಡ್ಡಬಳ್ಳಾಪುರ, ದೊಡ್ಡಬಳ್ಳಾಪುರ –ದೇವನಹಳ್ಳಿ, ದೇವನಹಳ್ಳಿ –ಮಾಲೂರು, ಮಾಲೂರು –ಹೀಲಲಿಗೆ, ಹೆಜ್ಜಾಲ- ಸೋಲೂರು, ಸೋಲೂರು –ನಿಡವಂಡ, ಹೆಜ್ಜಾಲ- ಹೀಲಲಿಗೆಯನ್ನು ಸಂಪರ್ಕಿಸಲಿದೆ.
ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನ ಸಭೆ ನಡೆಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ವೃತ್ತಾಕಾರದ ರೈಲು ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತೆ, ಜೋಡಣೆ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ 7 ಕೋಟಿ ಬಿಡುಗಡೆ ಮಾಡಲಾಗಿ ಮಾಡಿದೆ ಎಂದು ತಿಳಿಸಿದ್ದಾರೆ.
ಉಪನಗರ ರೈಲು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು, ವೃತ್ತಾಕಾರದ ರೈಲ್ವೆ ವಿಸ್ತರಣೆಯನ್ನು ಕೇಂದ್ರ ರೈಲ್ವೆ ಸಚಿವಾಲಯ ಅಭಿವೃದ್ಧಿಪಡಿಸಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರು -ಮಂಗಳೂರು ನಡುವಿನ ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗುವುದು. ನಂತರ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.