alex Certify ಗಮನಿಸಿ: ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

ಶಿಕ್ಷಣ ಸಚಿವಾಲಯವು ಮಾರ್ಚ್ 7 ರಂದು, ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸೂಚನೆ ನೀಡಿದೆ. ಇತ್ತೀಚೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಕಲಿ ವೆಬ್‌ಸೈಟ್‌ಗಳ ಹಾವಳಿ ಹೆಚ್ಚಾಗಿದೆ ಅಂತಹ ವೆಬ್‌ಸೈಟ್ ಹಾಗೂ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಎಚ್ಚರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಮುಗ್ಧ ಅರ್ಜಿದಾರರನ್ನು ವಂಚಿಸಲು, ಇಲಾಖೆಯ ಸರ್ವಶಿಕ್ಷಾ, ಸಮಗ್ರ ಶಿಕ್ಷಣ ಅಭಿಯಾನ ಹಾಗೂ ಶಿಕ್ಷಣ ಅಭಿಯಾನ ಯೋಜನೆಗಳ ಹೆಸಲ್ಲಿ, ಹಲವಾರು ನಕಲಿ ವೆಬ್‌ಸೈಟ್‌ಗಳನ್ನು ರಚಿಸಲಾಗಿದೆ ಎಂಬುದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ.

ಈ ನಕಲಿ ವೆಬ್‌ಸೈಟ್‌ಗಳು ಮುಗ್ಧರ ಬಳಿ ಹಣದ ಬೇಡಿಕೆಯಿಟ್ಟು, ಉದ್ಯೋಗಗಳನ್ನು ನೀಡುವ ಸುಳ್ಳು ಭರವಸೆ ನೀಡುತ್ತಿವೆ. ಅಭ್ಯರ್ಥಿಗಳ ದಾರಿ ತಪ್ಪಿಸಲು, ಅವರ ನಂಬಿಕೆ ಗಳಿಸಲು ಮೂಲ ವೆಬ್‌ಸೈಟ್‌ನಂತೆಯೇ ನಕಲಿ ವೆಬ್‌ಸೈಟ್‌ ಅನ್ನು ವಿನ್ಯಾಸ ಮಾಡಿದ್ದಾರೆ. ಅವುಗಳ ವಿಷಯ ಮತ್ತು ಪ್ರಸ್ತುತಿಯು ಕೂಡ ಹಾಗೇ ಇದ್ದು, ಈ ಮೂಲಕ ಅವರ ದಾರಿಯನ್ನು ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಸಚಿವಾಲಯ ಹೇಳಿದೆ.

ಈ ವೆಬ್‌ಸೈಟ್‌ಗಳು, ಅರ್ಜಿಗಳಿಗೆ ಪ್ರತಿಕ್ರಿಯಿಸಿದ ಮುಗ್ಧರಿಂದ ಹಣವನ್ನು ಕೇಳುತ್ತಿವೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಇಂತ ನಕಲಿ ವೆಬ್‌ಸೈಟ್‌ಗಳು ಬಂದಿರುವುದರಿಂದ ಈ ಮಾಹಿತಿ ನೀಡಲಾಗಿದೆ. ಉದ್ಯೋಗಗಳ ಭರವಸೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಹಣದ ಬೇಡಿಕೆಯಿಡುವ ಇಂತಹ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಇನ್ನೂ ಹಲವು ಇರಬಹುದು ಎಂದು ಸಚಿವಾಲಯ ತಿಳಿಸಿದೆ.

ಹೀಗಾಗಿ ಸಾರ್ವಜನಿಕರು ಅಂತಹ ವೆಬ್‌ಸೈಟ್‌ಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಲು, ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಲು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್/ವೈಯಕ್ತಿಕ ವಿಚಾರಣೆ/ದೂರವಾಣಿ/ಇ-ಮೇಲ್‌ಗೆ ಭೇಟಿ ನೀಡುವ ಮೂಲಕ ವೆಬ್‌ಸೈಟ್‌ಗಳು ಅಧಿಕೃತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ಸಲಹೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...