ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ, ರಾಜ್ಯಗಳಿಗೆ ಶುಕ್ರವಾರದಂದು ಮಹತ್ವದ ಮಾಹಿತಿಯನ್ನು ರವಾನೆ ಮಾಡಿದೆ.
ಕೆಲ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮತ್ತು ಡೀಲರ್ ಗಳು ಹೆಚ್ಚಿನ ಬ್ಯಾಟರಿ ಕೆಪ್ಯಾಸಿಟಿ ಹೊಂದಿರುವ ಹಾಗೂ ಪ್ರತಿ ಗಂಟೆಗೆ 40 ರಿಂದ 55 ಕಿ.ಮೀ. ವೇಗದಲ್ಲಿ ಚಲಿಸುವ ವಾಹನಗಳನ್ನು ಅನುಮತಿ, ವಿಮೆ ಹಾಗೂ ವಾಹನ ದೃಢೀಕರಣ ಇಲ್ಲದೆ ವಿತರಿಸುತ್ತಿದ್ದಾರೆ ಎಂದು ತಿಳಿಸಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಮೋಟಾರ್ ವೆಹಿಕಲ್ ಎಂದು ಪರಿಗಣಿಸದಿರಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಕೆಲವೊಂದು ನಿಯಮಗಳನ್ನು ರೂಪಿಸಿದ್ದು, ಇವುಗಳ ಪಾಲನೆ ಆಗುತ್ತಿಲ್ಲ ಎನ್ನಲಾಗಿದೆ.
ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ 0.25 kW ಸಾಮರ್ಥ್ಯದ 30 ನಿಮಿಷಗಳ ಪವರ್ ಹೊಂದಿದ್ದರೆ, ಇವುಗಳ ವೇಗ ಪ್ರತಿ ಗಂಟೆಗೆ 25 ಕಿ.ಮೀ ಒಳಗಿದ್ದರೆ ಹಾಗೂ ಬ್ಯಾಟರಿ ರಹಿತವಾಗಿ 60 ಕೆಜಿ ಒಳಗಿದ್ದರೆ ಮಾತ್ರ ಮೋಟಾರ್ ವೆಹಿಕಲ್ ಎಂದು ಪರಿಗಣಿಸಲಾಗುವುದಿಲ್ಲ.