ಬೆಂಗಳೂರು : ‘ಲೋಕಸಭೆ’ ಚುನಾವಣೆ ಹಿನ್ನೆಲೆ ಸಚಿವರಿಗೆ ಟಾಸ್ಕ್ ನೀಡಲಾಗಿದ್ದು, ಟಾಸ್ಕ್ ನಲ್ಲಿ ಉತ್ತಮ ಫಲಿತಾಂಶ ನೀಡದೇ ಇದ್ದರೆ ಸಚಿವರ ತಲೆದಂಡ ಮಾಡಲಾಗುತ್ತದೆ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ‘ಲೋಕಸಭೆಯಲ್ಲಿ ಉತ್ತಮ ರಿಸಲ್ಟ್ ಕೊಡದೇ ಇರುವ ಸಚಿವರ ತಲೆದಂಡ ಆಗುತ್ತದೆ , ಈ ಬಾರಿ ನಿರೀಕ್ಷೆಯ ಫಲಿತಾಂಶ ಬರದಿದ್ರೆ ಸಚಿವರ ತಲೆದಂಡವಾಗಲಿದೆ, ಸಚಿವರು ಚುನಾವಣೆಯನ್ನು ಗಂಭೀವಾಗಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸಚಿವರಿಗೆ ಖಡಕ್ ಸೂಚನೆ ನೀಡಿದೆ. ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲ್ಲು ಸಚಿವರಿಗೆ ಟಾಸ್ಕ್ ನೀಡಿದೆ.