ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಎಲ್ಲಾ 33 ಸಚಿವರಿಗೆ ಶೀಘ್ರವೇ ಹೊಸ್ ಕಾರ್ ಸಿಗಲಿವೆ.
30 ಲಕ್ಷ ರೂಪಾಯಿ ಮೌಲ್ಯದ ಹೊಸ ಇನೋವಾ ಹೈಕ್ರಾಸ್ ಹೈಬ್ರೀಡ್ ಕಾರ್ ಖರೀದಿಗೆ ಸರ್ಕಾರ ಆದೇಶಿಸಿದೆ. ಪ್ರತಿವಾಹನಕ್ಕೆ ಜಿಎಸ್‌ಟಿ ಸೇರಿದಂತೆ ಎಕ್ಸ್ ಶೋರೂಮ್ ಬೆಲೆ 30 ಲಕ್ಷ ರೂ.ನಂತೆ ಒಟ್ಟು 9.90 ಕೋಟಿ ರೂ. ಅನುದಾನ ನೀಡಲಾಗಿದೆ.
ನೂತನ ಸಚಿವರಿಗೆ ಹೊಸ ಇನೋವಾ ಹೈಕ್ರಾಸ್ ಹೈಬ್ರಿಡ್ ವಾಹನಗಳನ್ನು ಜಿಎಸ್‌ಟಿ ಸೇರಿದಂತೆ ಪ್ರತಿ ವಾಹನಕ್ಕೆ 30 ಲಕ್ಷ ರೂ.ನಂತೆ ಕಿರ್ಲೋಸ್ಕರ್ ಮೋಟಾರ್ಸ್ ಅವರಿಂದ ನೇರವಾಗಿ ಖರೀದಿಸಲು ಪಾರದರ್ಶಕತೆ ಅಧಿನಿಯಮದಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ನೀಡಿದೆ.