ಬೆಂಗಳೂರು: ಮೂವರು ಸಚಿವರ ಖಾತೆಗಳ ಮರು ಹಂಚಿಕೆ ಮಾಡಲಾಗಿದೆ. ಆರೋಗ್ಯ ಇಲಾಖೆಯೊಂದಿಗೆ ಡಾ.ಕೆ. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ವಹಿಸಲಾಗಿದೆ.
ಜೆ.ಸಿ. ಮಾಧುಸ್ವಾಮಿ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ, ಆನಂದ್ ಸಿಂಗ್ ಅವರಿಗೆ ಹಜ್ ಮತ್ತು ವಕ್ಫ್ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ.
ಇತ್ತೀಚೆಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಈ ವೇಳೆ ಆದ ಬದಲಾವಣೆಯಿಂದ ಕೆಲವು ಸಚಿವರು ಅಸಮಾಧಾನಗೊಂಡಿದ್ದರು. ಹಾಗಾಗಿ ಖಾತೆಯನ್ನು ಮರು ಹಂಚಿಕೆ ಮಾಡಲಾಗಿತ್ತು. ಆಗಲೂ ಅಸಮಾಧಾನ ಮುಂದುವರೆದ ಹಿನ್ನಲೆಯಲ್ಲಿ ಈಗ ಮತ್ತೊಮ್ಮೆ ಮರು ಹಂಚಿಕೆ ಮಾಡಲಾಗಿದೆ.