ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮಹಿಳಾ ತಂಡದ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.
ಮಹಿಳಾ ತಂಡದ ವಿಡಿಯೋ ಹಂಚಿಕೊಂಡಿರುವ ಅವರು, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮಹಿಳಾ ತಂಡವನ್ನು ಭೇಟಿ ಮಾಡಿ ಎಂದು ಶೀರ್ಷಿಕೆ ನೀಡಿ ಎಲ್ಲಾ ಮಹಿಳೆಯರಿಗು ಶುಭಾಶಯ ಕೋರಿದ್ದಾರೆ. 8 ಮಹಿಳೆಯರ ತಂಡದೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ, ಮಹಿಳಾ ಸಿಬ್ಬಂದಿ ವಂದೇ ಭಾರತ್ ರೈಲು ಚಾಲನೆಗೆ ಸಿಗ್ನಲ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
SHOCKING NEWS: ಸ್ವಂತ ಅಣ್ಣನನ್ನೆ ಗುಂಡಿಟ್ಟು ಕೊಂದ ತಮ್ಮ
ಮೇಡ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಭಾರತದಲ್ಲಿ ನಿರ್ಮಿಸಲಾಗಿದೆ. ಇದು ಇಂಟರ್ಸಿಟಿ ರೈಲಾಗಿದ್ದು, ಸ್ವದೇಶದಲ್ಲಿ ನಿರ್ಮಾಣವಾದ ಅತ್ಯಂತ ವೇಗವಾಗಿ ಚಲಿಸುವ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಇದರ ಸ್ಪೀಡ್ ಲಿಮಿಟ್ 180 km/hr. ಇನ್ನು 2019 ರಿಂದ ನವದೆಹಲಿ-ವಾರಣಾಸಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಚಲಿಸುತ್ತಿದೆ.