alex Certify ಸರ್ಕಾರಿ ನೌಕರರಿಗೆ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಕಡ್ಡಾಯ: ಸಿಎಂಗೆ ಸಚಿವ ಸಂತೋಷ್ ಲಾಡ್ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಕಡ್ಡಾಯ: ಸಿಎಂಗೆ ಸಚಿವ ಸಂತೋಷ್ ಲಾಡ್ ಮನವಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು, ನಿಗಮ -ಮಂಡಳಿ ನೌಕರರಿಗೆ ಕೆಲಸದ ದಿನಗಳಲ್ಲಿ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸುವಂತೆ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪತ್ರ ಬರೆದು ಮನವಿ ಮಾಡಿದ್ದಾರೆ.

ಖಾದಿ ಕೇವಲ ಬಟ್ಟೆಯಲ್ಲ ಅದೊಂದು ಜೀವನ ಪದ್ಧತಿ. ಸ್ವಾವಲಂಬಿ ಬದುಕಿನ ರೂಪಕವಾಗಿದೆ. ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಒಂದು ವ್ರತ ಎನ್ನುವ ಹಿರಿಯರ ನುಡಿ ಇದೆ. ಅಂತೆಯೇ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಗಾಂಧಿ ಸ್ಮರಣೆ ಚಿರಕಾಲ ಇರಲು ಈ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ನೈಸರ್ಗಿಕ ವಸ್ತು ಬಳಸಿ ಖಾದಿ ಬಟ್ಟೆ ತಯಾರಿಸುವುದರಿಂದ ಸರ್ಕಾರಿ ನೌಕರರು ಕೆಲಸಗಳಲ್ಲಿ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸಲು ಆದೇಶ ಹೊರಡಿಸಿದರೆ ಗಾಂಧೀಜಿ ಕನಸು ನನಸಾಗುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...