ದಾವಣಗೆರೆ: ಎರಡು ವರ್ಷ ಸಚಿವರಾದವರು ಸಚಿವ ಸ್ಥಾನ ಬಿಟ್ಟುಕೊಡಬೇಕೆಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಸಂಪುಟ ವಿಸ್ತರಣೆಯ ನಂತರ ಅಸಮಾಧಾನಗೊಂಡಿರುವ ರೇಣುಕಾಚಾರ್ಯ, ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಿ ಬಂದಿದ್ದರು. ಈಗ ಹೊಸ ಬಾಂಬ್ ಸಿಡಿಸಿರುವ ಅವರು ಎರಡು ವರ್ಷ ಸಚಿವರಾಗಿದ್ದವರು ತಮ್ಮ ಸ್ಥಾನ ತ್ಯಾಗ ಮಾಡಬೇಕು. ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.
ದೆಹಲಿವರೆಗೂ ಹೋಗಿ ಬಂದಿದ್ದಕ್ಕೆ ಕೆಲವು ಸಚಿವರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಟಾಂಗ್ ಕೊಟ್ಟ ರೇಣುಕಾಚಾರ್ಯ ಎರಡು ವರ್ಷ ಮಂತ್ರಿಯಾದವರು ತ್ಯಾಗ ಮಾಡಲಿ. ನಾವೇನು ಹಾದಿ ಬೀದಿಲಿ ಸಚಿವ ಸ್ಥಾನ ಕೇಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.