ರಾಷ್ಟ್ರೀಯ ಯುವ ದಿನದಿನದಂದು ಶಿವಮೊಗ್ಗದಲ್ಲಿ ಜಾರಿಯಾಗುತ್ತಿರುವ ಕಾಂಗ್ರೆಸ್ ಸರ್ಕಾರದ ಮಹತ್ವದ 5ನೇ ಗ್ಯಾರಂಟಿಯಾದ “ಯುವನಿಧಿ” ಯೋಜನೆ ನಮ್ಮ ಯುವಜನತೆಯ ಭವಿಷ್ಯಕ್ಕೆ ಭರವಸೆಯ ಬೆಳಕಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಾಲ್ಕು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ನಮ್ಮ ಸರ್ಕಾರ ಈಗ ಯುವಜನತೆಗೆ ಸುಭದ್ರ ಭವಿಷ್ಯ ಕಲ್ಪಿಸಿಕೊಡಲು ಮುಂದಡಿಯಿಟ್ಟಿದೆ. 2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾದಲ್ಲಿ ತೇರ್ಗಡೆ ಹೊಂದಿದ್ದರೂ ಉದ್ಯೋಗ ಸಿಗದಿರುವ ಯುವಜನತೆ ನಮ್ಮ ಯುವನಿಧಿಯ ಫಲಾಭವಿಗಳಾಗುವ ಅರ್ಹತೆ ಹೊಂದಿದ್ದಾರೆ.
ನಿರುದ್ಯೋಗ ಭತ್ಯೆಯ ಜೊತೆಗೆ ಯುವಕರ ಕೌಶಲ್ಯಾಭಿವೃದ್ಧಿಗೂ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಸೂಕ್ತ ತರಬೇತಿಗಳ ಜೊತೆಗೆ ಉದ್ಯೋಗವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ.ಯುವನಿಧಿ ಯೋಜನೆಯ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಇತರೆ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಸುಭದ್ರ ಭವಿಷ್ಯವನ್ನು ರೂಪಿಸಿಕೊಳ್ಳಿ.ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://sevasindhu.karnataka.gov.in ಎಂದು ಮಾಹಿತಿ ಹಂಚಿಕೊಂಡಿದ್ದಾರೆ.