ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸಲು ಸಿದ್ಧ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೈಕಮಾಂಡ್ ನಿಂದ ಇನ್ನು ಯಾವ ಸೂಚನೆ ಬಂದಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹೇಳಿದರೆ ಸ್ಪರ್ಧೆಗೆ ಸಿದ್ದ. 34 ಸಚಿವರಿಗೂ ಪ್ರತಿ ಲೋಕಸಭೆ ಕ್ಷೇತ್ರದ ಉಸ್ತುವಾರಿ ಕೊಡುತ್ತಾರೆ. ಹಾಸನದಲ್ಲಿ ನನ್ನ ನೇತೃತ್ವದಲ್ಲಿ ನಡೆಯುತ್ತೆ ಎಂಬ ನಂಬಿಕೆ ಇದೆ ಎಂದರು.
ಇದೇ ವೇಳೆ ಹಾಲಿನಲ್ಲಿ ಕಲಬೆರಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಹಾಲಿನಲ್ಲಿ ಕಲಬೆರಿಕೆ ಕೇಳಿ ನನಗೂ ಬೇಸರವಾಗಿದೆ. ನಂದಿನಿ ಹಾಲು ಹೊರತುಪಡಿಸಿ ಬೇರೆ ಎಲ್ಲವೂ ಸ್ಲೋ ಪಾಯಿಸನ್ ಆಗಿದೆ. ತುಮಕೂರು ಪಾಲಿಕೆ ಕಮಿಷ್ನರ್ ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.