ಬೆಂಗಳೂರು : ಸಚಿವ ಬಿ. ನಾಗೇಂದ್ರ ಬಳಿ ನಾನು ರಾಜೀನಾಮೆ ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಚಿವ ಬಿ. ನಾಗೇಂದ್ರ ಬಳಿ ನಾನು ರಾಜೀನಾಮೆ ಕೇಳಿಲ್ಲ, ಕೊಡಿ ಅಂತ ಕೇಳಿಲ್ಲ. ಸಚಿವರನ್ನು ಕರೆದು ಮಾತನಾಡಿದ್ದೀನಿ ಅಷ್ಟೇ ಎಂದರು. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಎಸ್ ಐ ಟಿ ರಚನೆ ಮಾಡ್ತೀವಿ, ತನಿಖೆ ನಡೆಸುತ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದೆ. ಅವರು ರಾಜೀನಾಮೆ ಕೊಡುವವರೆಗೂ ನಾವು ಬಿಡೋಲ್ಲ, ನಾವು ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.