ಬೆಂಗಳೂರು: ಸಚಿವ S.T. ಸೋಮಶೇಖರ್ ಮಗನಿಗೆ ಅಶ್ಲೀಲ ವೀಡಿಯೋ ಇದೆಯೆಂದು ಬ್ಲಾಕ್ ಮೇಲ್ ಮಾಡಲಾಗಿದ್ದು, ಜ್ಯೋತಿಷಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ. ನಗರದ ಜ್ಯೋತಿಷಿಯೊಬ್ಬರ ಪುತ್ರನನ್ನು ಬಂಧಿಸಲಾಗಿದೆ. ರಾಹುಲ್ ಭಟ್(22) ಬಂಧಿತನೆಂದು ಹೇಳಲಾಗಿದೆ. ಸಿಸಿಬಿ ಪೊಲೀಸರು ರಾಹುಲ್ ಭಟ್ ನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 5 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ.
ಅಪರಿಚಿತರಿಂದ ನಕಲಿ ವಿಡಿಯೋ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡುತ್ತಿರುವ ಬಗ್ಗೆ ಸಚಿವ ಸೋಮಶೇಖರ್ ಪುತ್ರ ನಿಶಾಂತ್ ದೂರು ನೀಡಿದ್ದರು. ಹಣ ನೀಡದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಕಿಡಿಗೇಡಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಿಶಾಂತ್ ದೂರು ನೀಡಿದ್ದರು.
ಡಿಸೆಂಬರ್ 25ರಂದು ಸಚಿವರ ಆಪ್ತ ಸಹಾಯಕರಿಗೆ ವಿಡಿಯೋ ಕಳುಹಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ನಿಶಾಂತ್ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆನ್ನಲಾಗಿದೆ.
ವಿಡಿಯೋ ಕಳುಹಿಸಿ ಒಂದು ಕೋಟಿ ರೂಪಾಯಿ ನೀಡುವಂತೆ ಬ್ಲಾಕ್ಮೇಲ್ ಮಾಡಲಾಗಿದ್ದು, ನಿಶಾಂತ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಕೆಲವು ದಿನಗಳ ಹಿಂದೆ ಅಪರಿಚಿತ ನಂಬರ್ ನಿಂದ ವಾಟ್ಸಾಪ್ ನಲ್ಲಿ ಒಂದು ಮೆಸೇಜ್ ಬಂದಿರುವುದಾಗಿ ನಿಶಾಂತ್ ಹೇಳಿದ್ದಾರೆ. ವಿಡಿಯೋದಲ್ಲಿ ತನ್ನ ಫೋಟೋ ಎಡಿಟ್ ಮಾಡಿ ಕಳುಹಿಸಿದ್ದರು. ಬಳಿಕ ವಾಟ್ಸಪ್ ಮೂಲಕ ಪಿಎಗೆ ವಿಡಿಯೋ ಕಳುಹಿಸಿ ತನಗೆ, ತಂದೆಗೆ ಬೆದರಿಕೆ ಹಾಕಿದ್ದರು. ಒಂದು ಕೋಟಿ ರೂಪಾಯಿ ನೀಡದಿದ್ದರೆ. ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸರಿಗೆ ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ದೂರು ನೀಡಿದ್ದಾರೆ,